ನವದೆಹಲಿ: ಇಂಟೆಲಿಜೆನ್ಸ್ ಬ್ಯೂರೋ (ಐಬಿ) ತನ್ನ ಮಾಹಿತಿ ಸಂಗ್ರಹಿಸುವ ನೆಟ್ವರ್ಕ್ ಅನ್ನು ಪ್ರಸ್ತುತ ಇರುವ 374 ಸ್ಥಳಗಳಿಂದ 825 ಸ್ಥಳಗಳಿಗೆ ಹೆಚ್ಚಳಗೊಳಿಸಲು ಸಜ್ಜಾಗಿದೆ. ಇದರಿಂದ ಭಾರತದ ಭದ್ರತೆ ಮತ್ತು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ ಹೆಚ್ಚಿನ ಬಲ ಸಿಗಲಿದೆ.
1999 ರ ಕಾರ್ಗಿಲ್ ಯುದ್ಧದ ನಂತರ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವು 2001 ರಲ್ಲಿ ಸ್ಥಾಪಿಸಿದ ಮಲ್ಟಿ ಏಜೆನ್ಸಿ ಸೆಂಟರ್ (ಎಂಎಸಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಇಂಟರ್ನಲ್ ಇಂಟೆಲಿಜೆನ್ಸ್ ಏಜೆನ್ಸಿ ತನ್ನ ನೆಟ್ವರ್ಕ್ ಅನ್ನು ಪ್ರಸ್ತುತ 374 ರಿಂದ 825 ಸ್ಥಳಗಳಿಗೆ ವಿಸ್ತರಿಸಲು ಮುಂದಾಗಿದೆ.
ಮಲ್ಟಿ ಏಜೆನ್ಸಿ ಸೆಂಟರ್ ಸಂಬಂಧಪಟ್ಟ ಏಜೆನ್ಸಿಗಳಿಗಾಗಿ ಮಾಹಿತಿ ಸಂಗ್ರಹಿಸುತ್ತದೆ, ಹಂಚಿಕೊಳ್ಳುತ್ತದೆ ಸಂಗ್ರಹಿಸುತ್ತದೆ ಮತ್ತು ಪ್ರಸಾರ ಮಾಡುತ್ತದೆ. ಈ ನೆಟ್ವರ್ಕ್ ಎರಡು ಸಾಫ್ಟ್ವೇರ್ ಪ್ಲಾಟ್ಫಾರ್ಮ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದು ಥ್ರೆಟ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಟಿಎಂಎಸ್) ಎಂಬ ಗುಪ್ತಚರ ಹಂಚಿಕೆ ಸಾಧನ ಮತ್ತು ನ್ಯಾಷನಲ್ ಮೆಮೊರಿ ಬ್ಯಾಂಕ್ (ಎನ್ಎಂಬಿ) ಎಂಬ ಡೇಟಾಬೇಸ್ ಸಾಧನ.
ಕೇಂದ್ರ ಗೃಹ ಸಚಿವಾಲಯವು ಸಂಸದೀಯ ಸಮಿತಿಯೊಂದಿಗೆ ಹಂಚಿಕೊಂಡ ನೀಲನಕ್ಷೆಯ ಪ್ರಕಾರ, ರಾಜ್ಯ ಪೊಲೀಸ್ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಆಯ್ಕೆಯಾದ 475 ಜಿಲ್ಲೆಗಳಿಗೆ ಐಬಿ ಜಾಲವನ್ನು ವಿಸ್ತರಿಸುವ ಯೋಜನೆ ಇದೆ.
ಈ ಪೈಕಿ 451 ಸ್ಥಳಗಳು ಸಂಪರ್ಕವನ್ನು ಒದಗಿಸಲು ಕಾರ್ಯಸಾಧ್ಯವೆಂದು ಕಂಡುಬಂದಿದೆ ಮತ್ತು 174 ಸ್ಥಳಗಳನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ನಂತರ, ನೆಟ್ವರ್ಕ್ 825 ಸ್ಥಳಗಳ ವ್ಯಾಪ್ತಿ ಹೊಂದಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.