ಇಂಧೋರ್: ಉತ್ತರಪ್ರದೇಶದ ಬಳಿಕ ಇದೀಗ ಮಧ್ಯಪ್ರದೇಶ ಬಲವಂತದ ಮತಾಂತರವನ್ನು ತಡೆಗಟ್ಟಲು ಕಾನೂನು ಜಾರಿಗೊಳಿಸುತ್ತಿದೆ. ವಿವಾಹದ ಸಲುವಾಗಿ ಅಥವಾ ಹಣದ ಆಮಿಷ, ಬಲವಂತಕ್ಕೆ ಒಳಗಾಗಿ ಮತಾಂತರವಾಗುವುದನ್ನು ನಿಷೇಧಿಸುವ ಕಾನೂನು ಅಲ್ಲಿ ಜಾರಿಯಾಗಲಿದೆ. ಇದಕ್ಕೆ ಅಲ್ಲಿನ ಸಂಪುಟ ಅನುಮೋದನೆಯನ್ನು ನೀಡಿದೆ.
ಹೊಸ ಕಾನೂನು 1968 ರ ಧಾರ್ಮಿಕ ಸ್ವತಂತ್ರ್ಯ ಕಾನೂನನ್ನು ರದ್ದುಗೊಳಿಸುತ್ತದೆ. ಮಸೂದೆಯು ವಿವಾಹದ ಮೂಲಕ ಮತಾಂತರವನ್ನು ತಡೆಯುವ ಗುರಿಯನ್ನು ಹೊಂದಿದೆ. ಇದಲ್ಲದೆ, ಮಸೂದೆಯು ಹಣಕಾಸಿನ ಆಮಿಷ, ಮೋಸದ ಮತ್ತು ಬಲವಂತದ ವಿಧಾನಗಳಿಂದ ಧಾರ್ಮಿಕ ಮತಾಂತರವನ್ನು ನಿಷೇಧಿಸಲಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಕಾನೂನು ಬಲವಂತದ ಮತಾಂತರಕ್ಕೆ ಕನಿಷ್ಠ 25 ಸಾವಿರ ರೂ.ಗಳ ದಂಡ ಮತ್ತು 1-5 ವರ್ಷಗಳ ಜೈಲು ಶಿಕ್ಷೆಯನ್ನು ಅಪರಾಧಿಗಳಿಗೆ ನೀಡಲಿದೆ. ಇದಲ್ಲದೆ, ಅಪ್ರಾಪ್ತರು ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಗೊಳಿಸಿದರೆ ಕನಿಷ್ಠ 2-10 ವರ್ಷಗಳ ಜೈಲು ಶಿಕ್ಷೆಯನ್ನು ಕನಿಷ್ಠ 50,000 ರೂ.ದಂಡವನ್ನು ಅನುಭವಿಸಬೇಕಾಗುತ್ತದೆ.
ಧಾರ್ಮಿಕ ಮತಾಂತರದ ಸಂದರ್ಭದಲ್ಲಿ, ಪೀಡಿತ ವ್ಯಕ್ತಿ ಅಥವಾ ಅವನ / ಅವಳ ಪೋಷಕರು ಅಥವಾ ರಕ್ತ ಸಂಬಂಧಿಗಳು ದೂರು ಸಲ್ಲಿಸಬಹುದು. ಅಪರಾಧವು ಜಾಮೀನು ರಹಿತವಾಗಿರುತ್ತದೆ. ಮತಾಂತರದ ಉದ್ದೇಶದಿಂದ ನಡೆಸುವ ಮದುವೆಯನ್ನು ಶೂನ್ಯ ಮತ್ತು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ.
ಒಬ್ಬ ವ್ಯಕ್ತಿಯು ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ಬಯಸಿದರೆ, ಅವನು / ಅವಳು ಘೋಷಣಾ ಪತ್ರವನ್ನು ಜಿಲ್ಲಾಧಿಕಾರಿಗೆ ಒಂದು ತಿಂಗಳ ಮುಂಚಿತವಾಗಿ ಸಲ್ಲಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.