ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಂಸ್ಥೆ ತನ್ನ ಚಂದ್ರಯಾನ-2 ಮಿಷನ್ನ ಮೊದಲ ಹಂತದ ದತ್ತಾಂಶ ವರದಿಯನ್ನು ಅದು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದೆ.
ಚಂದ್ರಯಾನ-2 ಭಾರತದ ಮಹತ್ವಾಕಾಂಕ್ಷೆಯ ಯೋಜನೆ, 2019ರ ಜುಲೈ 22ರಂದು ಆರ್ಬಿಟರ್, ರೋವರ್ ಮತ್ತು ವಿಕ್ರಂ ಲ್ಯಾಂಡರ್ ಅನ್ನು ಒಳಗೊಂಡ ‘ಚಂದ್ರಯಾನ-2’ ಅನ್ನು ಇಸ್ರೋ ಉಡಾವಣೆಗೊಳಿಸಿತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ವಿಫಲವಾಗಿತ್ತು. ಆದರೆ ಆರ್ಬಿಟರ್ ಕಕ್ಷೆ ಸೇರಿತ್ತು.
“ಎಲ್ಲಾ ಪ್ರಯೋಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಲಭ್ಯವಾದ ದತ್ತಾಂಶವು ಉಡಾವಣೆಯ ಪೂರ್ವದ ಭರವಸೆಗಳನ್ನು ತಲುಪಿಸುವ ಅತ್ಯುತ್ತಮ ಸಾಮರ್ಥ್ಯವನ್ನು ಸೂಚಿಸುತ್ತದೆ” ಎಂದು ಇಸ್ರೋ ಹೇಳಿದೆ.
ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ವಿಜ್ಞಾನ ದತ್ತಾಂಶ ಕೇಂದ್ರದಲ್ಲಿ ಚಂದ್ರಯಾನ-2 ಮಿಷನ್ನ ಮೊದಲ ಹಂತದ ದತ್ತಾಂಶ ವರದಿಯನ್ನು ಸಂಗ್ರಹಿಸಲಾಗಿದ್ದು, ಇದನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿದೆ.
ದತ್ತಾಂಶವನ್ನು ಪ್ರಮಾಣಿತ, ಜಾಗತಿಕವಾಗಿ ಅನುಸರಿಸಿದ ಪ್ಲಾನೆಟರಿ ಡಾಟಾ ಸಿಸ್ಟಮ್ 4 (ಪಿಡಿಎಸ್ 4) ಸ್ವರೂಪದಲ್ಲಿ ತಯಾರಿಸಲಾಗುತ್ತದೆ ಎಂದು ಇಸ್ರೋ ಹೇಳಿದೆ. ಭಾರತೀಯ ಬಾಹ್ಯಾಕಾಶ ವಿಜ್ಞಾನ ದತ್ತಾಂಶ ಕೇಂದ್ರ (ಐಎಸ್ಎಸ್ಡಿಸಿ) ಇಸ್ರೋ ಗ್ರಹಗಳ ಕಾರ್ಯಗಳಿಗಾಗಿ ಇರುವ ಗ್ರಹಗಳ ದತ್ತಾಂಶ ಸಂಗ್ರಹದ ನೋಡಲ್ ಕೇಂದ್ರವಾಗಿದೆ.
First set of #Chandrayaan2 payload’s data are publicly released for wider science use.
For details visithttps://t.co/bRc4m8S5Aghttps://t.co/kSXPvlNo6Lhttps://t.co/wvGfY5YkdU pic.twitter.com/5ucD6flNNZ
— ISRO (@isro) December 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.