ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸರ್ಕಾರದ ಲೈಟ್ ಹೌಸ್ ಪ್ರಾಜೆಕ್ಟ್ (ಎಲ್ಎಚ್ಪಿ) ಅಡಿಯಲ್ಲಿ ಬಡ ನಗರವಾಸಿಗಳಿಗೆ 1,040 ಕ್ಕೂ ಹೆಚ್ಚು ಫ್ಲ್ಯಾಟ್ಗಳನ್ನು ವಿತರಿಸಲಿದ್ದಾರೆ. ಫ್ಲ್ಯಾಟ್ನ ವೆಚ್ಚ 12.59 ಲಕ್ಷ ರೂ. ಆಗಲಿದ್ದು, ಇದರಲ್ಲಿ 7.83 ಲಕ್ಷ ರೂ.ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನವಾಗಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಉಳಿದ 4.76 ಲಕ್ಷ ರೂ.ಗಳನ್ನು ಇಡಬ್ಲ್ಯೂಎಸ್ ವಿಭಾಗದ ಫಲಾನುಭವಿಗಳು ಪಾವತಿಸಲಿದ್ದಾರೆ. ಫ್ಲ್ಯಾಟ್ಗಳ ಹಂಚಿಕೆಯನ್ನು ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ನಗರ) ಮತ್ತು ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಮಾಡಲಾಗುತ್ತದೆ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಧ್ಯಕ್ಷತೆಯಲ್ಲಿ ಮುಕ್ತ ಲಾಟರಿ ನಡೆಸಿ ವಿತರಣೆ ಮಾಡಲಾಗುತ್ತದೆ.
ದೇಶದ ಗ್ಲೋಬಲ್ ಟೆಕ್ನಾಲಜಿ ಚಾಲೆಂಜ್ ಇಂಡಿಯಾ (ಜಿಎಚ್ಟಿಸಿ ಇಂಡಿಯಾ) ತಂತ್ರಜ್ಞಾನದ ಅಡಿಯಲ್ಲಿ, ದೇಶದ 14 ರಾಜ್ಯಗಳು ನಗರದ ದುರ್ಬಲ ವರ್ಗವನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದವು.
ಈ ಪೈಕಿ ಆರು ರಾಜ್ಯಗಳಾದ ಮಧ್ಯಪ್ರದೇಶ (ಇಂದೋರ್), ಗುಜರಾತ್ (ರಾಜ್ಕೋಟ್), ತಮಿಳುನಾಡು (ಚೆನ್ನೈ), ಜಾರ್ಖಂಡ್ (ರಾಂಚಿ), ತ್ರಿಪುರ (ಅಗರ್ತಲಾ) ಮತ್ತು ಉತ್ತರ ಪ್ರದೇಶ (ಲಕ್ನೋ) ಗಳನ್ನು ‘ಲೈಟ್ ಹೌಸ್’ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಆಯ್ಕೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.