ನವದೆಹಲಿ: ಐಐಎಸ್ಎಫ್ -2020 ರ ಮೊದಲ ದಿನದಂದು ನಡೆದ ಗಿನ್ನೆಸ್ ವಿಶ್ವ ದಾಖಲೆ (GWR) ಕಾರ್ಯಕ್ರಮದಲ್ಲಿ, ನವದೆಹಲಿಯ CSIR-NISTADSನ ಓಪನ್ ಪಾರ್ಕ್ ಏರಿಯಾದಲ್ಲಿ 50 ವಿದ್ಯಾರ್ಥಿಗಳು ನೇರವಾಗಿ, 6,874 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವರ್ಚುವಲ್ ಆಗಿ ಒಟ್ಟು ಸೇರಿ ನೆರಳು- ಬೆಳಕು ಮತ್ತು ಟೈಮ್ ಡಿವೈಸ್ನೊಂದಿಗೆ ಸೂರ್ಯ ಗಡಿಯಾರಗಳನ್ನು ಜೋಡಿಸಲು ಪ್ರಯತ್ನಿಸಿದರು.
ಗಿನ್ನೆಸ್ ವಿಶ್ವ ದಾಖಲೆಗಳಿಗಾಗಿನ ಈ ಕಾರ್ಯಕ್ರಮವು ಸೂರ್ಯ-ಗಡಿಯಾರಗಳನ್ನು ತಯಾರಿಸುವ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಏಕಕಾಲದಲ್ಲಿ ಒಟ್ಟುಗೂಡಿಸಲು ಪ್ರಯತ್ನಿಸಿದೆ. ಲಂಡನ್ನ ಸಂಪನ್ಮೂಲ ವ್ಯಕ್ತಿಯಾದ ಮಿಸ್ ಸೋಫಿಯಾ ಈ ಕಾರ್ಯಕ್ರಮಕ್ಕೆ ಆನ್ಲೈನ್ನಲ್ಲಿ ಸೇರಿಕೊಂಡರು ಮತ್ತು ಲಂಡನ್ನ 130 ವಿದ್ಯಾರ್ಥಿಗಳು ಸೂರ್ಯ ಗಡಿಯಾರ ಕಿಟ್ ಅನ್ನು ಜೋಡಿಸಲು ಪ್ರಯತ್ನಿಸಿದರು. ಐಐಎಸ್ಎಫ್ 2020 ರ ಗಿನ್ನೆಸ್ ವಿಶ್ವ ದಾಖಲೆಯ ಮೊದಲ ಚಟುವಟಿಕೆ ಇದು.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಶಾಲಾ ಮಕ್ಕಳನ್ನು ಅಭಿನಂದಿಸಿದರು ಮತ್ತು ದೈನಂದಿನ ಜೀವನದಲ್ಲಿ ವಿಜ್ಞಾನವನ್ನು ಮುಂದುವರಿಸುವಂತೆ ಪ್ರೇರೇಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.