ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ 280 ಡಿಡಿಸಿ ಸ್ಥಾನಗಳ ಪೈಕಿ 244 ಡಿಡಿಸಿ ಸ್ಥಾನಗಳ ಫಲಿತಾಂಶವನ್ನು ಈವರೆಗೆ ಘೋಷಿಸಲಾಗಿದೆ.
70 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಗ್ರಸ್ಥಾನದಲ್ಲಿದೆ ಮತ್ತು 56 ಸ್ಥಾನಗಳೊಂದಿಗೆ ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಂತರದ ಸ್ಥಾನ ಪಡೆದಿದೆ.
ಸ್ವತಂತ್ರ ಅಭ್ಯರ್ಥಿಗಳು 43 ಸ್ಥಾನಗಳನ್ನು ಗೆದ್ದರೆ, ಮೆಹಬೂಬಾ ಮುಫ್ತಿಯ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 26 ಸ್ಥಾನಗಳನ್ನು ಗಳಿಸಿದೆ.
ಕಾಂಗ್ರೆಸ್ ಇದುವರೆಗೆ 21 ಸ್ಥಾನಗಳನ್ನು ಗೆದ್ದಿದ್ದರೆ, ಜಮ್ಮು & ಕಾಶ್ಮೀರ ಅಪ್ನಿ ಪಕ್ಷಕ್ಕೆ 10 ಸ್ಥಾನಗಳು ಸಿಕ್ಕಿವೆ.
ಸಿಪಿಐ (ಎಂ) 6 ಸ್ಥಾನಗಳನ್ನು ಪಡೆದರೆ, ಜೆ & ಕೆ ಪೀಪಲ್ಸ್ ಕಾನ್ಫರೆನ್ಸ್ 5 ಸ್ಥಾನಗಳನ್ನು ಪಡೆದುಕೊಂಡಿದೆ.
ಜೆಕೆಪಿಎಂಗೆ 3 ಸ್ಥಾನಗಳು ಮತ್ತು 2 ಸ್ಥಾನಗಳನ್ನು ಜೆ & ಕೆ ನ್ಯಾಷನಲ್ ಪ್ಯಾಂಥರ್ಸ್ ಪಕ್ಷ ಗೆದ್ದಿದೆ.
ಪಿಡಿಎಫ್ ಮತ್ತು ಬಹುಜನ ಸಮಾಜವಾದಿ ಪಕ್ಷಕ್ಕೆ (ಬಿಎಸ್ಪಿ) ತಲಾ ಒಂದು ಸ್ಥಾನ ಸಿಕ್ಕಿದೆ.
ಜಮ್ಮು ವಿಭಾಗದ ಜಮ್ಮು, ಉಧಂಪುರ್, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಬಿಜೆಪಿ ಮುನ್ನಡೆಸಿ ಸಾಧಿಸಿದೆ.
ಬಿಜೆಪಿ ಜಮ್ಮು ಮತ್ತು ಉಧಂಪುರ್ ಜಿಲ್ಲೆಗಳಲ್ಲಿ ತಲಾ 11, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ತಲಾ 13 ಸ್ಥಾನಗಳನ್ನು ಗೆದ್ದಿದೆ.
ರಿಯಾಸಿಯಲ್ಲಿ ಬಿಜೆಪಿ 7 ಸ್ಥಾನಗಳನ್ನು, ದೋಡಾದಲ್ಲಿ 8 ಸ್ಥಾನಗಳನ್ನು ಗಳಿಸಿತು. ಸ್ವತಂತ್ರರು 8 ಸ್ಥಾನಗಳಲ್ಲಿ ಬಹುಮತ ಪಡೆದ ಏಕೈಕ ಜಿಲ್ಲೆ ಪೂಂಚ್.
ರಾಜೌರಿ ಮತ್ತು ರಾಂಬನ್ ಜಿಲ್ಲೆಗಳಿಂದ ಬಿಜೆಪಿಗೆ ತಲಾ ಮೂರು ಸ್ಥಾನಗಳು ದೊರೆತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.