ಗದಗ: ಸವದಿ ತಾಲೂಕಿನ ರೋಣ ಎಂಬಲ್ಲಿನ ರೈತ ಪ್ರಕಾಶ್ ಜೋಗರೆಡ್ಡಿ ಅವರು ಬೆಳೆದ ಮೆಣಸಿನಕಾಯಿ ಬೆಳೆಗೆ ಗದಗ ಎಪಿಎಂಸಿಯಲ್ಲಿ ಕ್ವಿಂಟಲ್ಗೆ 41 ಸಾವಿರ ರೂ. ಬೆಲೆ ದೊರಕಿದೆ.
ಈ ವರ್ಷದ ಆರಂಭದ ಅವಧಿಯಲ್ಲಿ ಎಪಿಎಂಸಿಯಲ್ಲಿ ಕ್ವಿಂಟಲ್ಗೆ 35 ಸಾವಿರ ರೂ. ಗಳಿತ್ತು. ಸದ್ಯ ಪ್ರಕಾಶ್ ಜೋಗರೆಡ್ಡಿ ಅವರಿಗೆ ಇದೀಗ ಸಿಕ್ಕಿರುವ ಬೆಲೆಯೇ ಈ ಬಾರಿಯ ಎಪಿಎಂಸಿಯ ಅತ್ಯಧಿಕ ಬೆಲೆಯಾಗಿದೆ. ಶನಿವಾರ ಜೋಗರೆಡ್ಡಿ ಅವರು ಮಾರುಕಟ್ಟೆಗೆ ಮೆಣಸಿನಕಾಯಿ ಬೆಳೆ ಕೊಂಡುಹೋಗಿದ್ದರು. ಈ ಬೆಳೆಗೆ ಇ-ಟೆಂಡರಿಂಗ್ ನಲ್ಲಿ 41,101 ರೂ. ದೊರೆತಿದೆ.
ಜೋಗರೆಡ್ಡಿ ಅವರು ತಮ್ಮ ಎರಡು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಬೆಲೆ ಕಡಿಮೆಯಾಗುವ ಭೀತಿಯಿಂದ ಬೇರೆ ರೈತರೆಲ್ಲರೂ ನವೆಂಬರ್ ತಿಂಗಳಲ್ಲಿಯೇ ಬೆಳೆ ಮಾರಾಟ ಮಾಡಿದ್ದರು. ಆದರೆ ಜೋಗರೆಡ್ಡಿ ಅವರು ಡಿಸೆಂಬರ್ ತಿಂಗಳಲ್ಲಿ ಮಾರಾಟ ಮಾಡಿದ್ದು, ಅವರಿಗೆ 41 ಸಾವಿರ ರೂ. ಬೆಲೆ ದೊರಕಿದೆ. ಇದರಿಂದ ಅವರಿಗೆ ಇತರ ರೈತರಿಂದ ಹೆಚ್ಚಿನ ಲಾಭ ದೊರೆತಂತಾಗಿದೆ.
ನವೆಂಬರ್ ತಿಂಗಳಲ್ಲಿ ಬೆಳೆ ಮಾರಾಟ ಮಾಡಿದ ರೈತರಿಗೆ 25 ಸಾವಿರದಿಂದ, 28 ಸಾವಿರ ರೂ.ಗಳಿಗೆ ಬೆಳೆ ಮಾರಾಟವಾಗಿತ್ತು. ಕೊಂಚ ತಡವಾಗಿ ಮೆಣಸಿನಕಾಯಿ ಮಾರಾಟ ಮಾಡಿದ ಪ್ರಕಾಶ್ ಜೋಗರೆಡ್ಡಿ ಅವರು ಮಾತ್ರ ಬಂಪರ್ ಲಾಭ ಪಡೆದಿದ್ದಾರೆ. 2015 ರಿಂದ ಪ್ರಕಾಶ್ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದು, ತಮಗೆ ಹೆಚ್ಚು ಲಾಭ ದೊರೆಯುವ ನಿರೀಕ್ಷೆ ಇತ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.