ಬೆಂಗಳೂರು: ರಾಜ್ಯಕ್ಕೆ ಹಸು, ಕರುಗಳನ್ನು ತಲುಪಿಸುವ ಮಹತ್ವದ ಕಾರ್ಯಕ್ಕೆ ಮಲ್ಲೇಶ್ವರಂನ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಗುಡಿಗೊಂದು ಗೋವು ಯೋಜನೆಯನ್ನು ಕಾರ್ಯಾರಂಭ ಮಾಡಿದೆ.
ಟಿಟಿಡಿಯ ಸ್ಥಾನಿಕ ಸಲಹಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಟಿಟಿಡಿ ಬೋರ್ಡ್ ತಿರುಪತಿಯ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ನೇತೃತ್ವದಲ್ಲಿ ಈ ಕೆಲಸ ನಡೆಯುತ್ತಿದ್ದು, ಇಸ್ಕಾನ್, ಯದುಗಿರಿ ಯತಿರಾಜ ಮಠ, ತಿರುಮಲ ಗಿರಿ ಜೆಪಿ ನಗರ, ಘಾಟಿ ಸುಬ್ರಹ್ಮಣ್ಯ, ಕೈವಾರದ ಯೋಗಿ ನಾರಾಯಣ ಮಠಕ್ಕೆ ಗೋವುಗಳನ್ನು ನೀಡಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ವಿಶೇಷ ಸ್ಥಾನವಿದ್ದು, ಗೋವುಗಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ಟಿಟಿಡಿ ಈ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ.
ಈ ಯೋಜನೆಗನುಗುಣವಾಗಿ ಈಗಾಗಲೇ ಟಿಟಿಡಿಗೆ ಹಲವು ದೇಗುಲಗಳು, ಸಂಘ ಸಂಸ್ಥೆಗಳು ಗೋವುಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳುತ್ತಿವೆ. ವೈಕುಂಠ ಏಕಾದಶಿಯ ಬಳಿಕ ಈ ಯೋಜನೆ ನಿರಂತರವಾಗಿ ಮುಂದುವರಿಯಲಿದೆ ಎಂದು ಟಿಟಿಡಿ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಗೋವುಗಳ ಸಂರಕ್ಷಣೆಯೇ ಆಗಿದ್ದು, ಇದೊಂದು ಸಂಪೂರ್ಣ ಯೋಜನೆಯಾಗಿದೆ. ದೇಗುಲಗಳಿಗೆ ಗೋವುಗಳನ್ನು ನೀಡುವುದರಿಂದ ಅವುಗಳ ಸಂರಕ್ಷಣೆಯ ಜೊತೆಗೆ, ಹಾಲು ಸೇರಿದಂತೆ ಇನ್ನಿತರ ಹಸುಗಳಿಂದ ತಯಾರಾಗುವ ವಸ್ತುಗಳನ್ನು ದೇಗುಲದ ಕಾರ್ಯಗಳಿಗೆ ಬಳಕೆ ಮಾಡಬಹುದಾಗಿದೆ ಎಂದು ಟಿಟಿಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.