ನವದೆಹಲಿ: ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನೇಹಾ ಸಿಂಗ್ ಅವರು ನೈಸರ್ಗಿಕ ಬಣ್ಣಗಳನ್ನು ಬಳಸಿ ವಿಶ್ವದ ಅತಿದೊಡ್ಡ ಚಿತ್ರವನ್ನು ರಚಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಬಲಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೀಹಾರಿ ಪ್ರತಾಪ್ ಶಾಹಿ ಭಾನುವಾರ ಹೇಳಿದ್ದಾರೆ.
ಬಲ್ಲಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೀಹಾರಿ ಪ್ರತಾಪ್ ಶಾಹಿ ಅಧಿಕೃತ ಹೇಳಿಕೆ ನೀಡಿದ್ದು, “ನೇಹಾ ಸಿಂಗ್ ನೈಸರ್ಗಿಕ ಬಣ್ಣಗಳನ್ನು ಬಳಸಿ ವಿಶ್ವದ ಅತಿದೊಡ್ಡ ವರ್ಣಚಿತ್ರವನ್ನು ಬಿಡಿಸಿದ್ದಾರೆ. ‘ಮೋಕ್ಷ ಕಾ ವೃಕ್ಷ್ ‘ (ಮೋಕ್ಷದ ಮರ) ಎಂಬ ಥೀಮ್ನ ಚಿತ್ರಕಲೆ 62.72 ಚದರ ಮೀಟರ್ ಅಳತೆಯ ಗಾತ್ರದ್ದಾಗಿದೆ. ಹೀಗಾಗಿ ನೇಹಾ ಅವರ ಹೆಸರು ಗಿನ್ನೆಸ್ ವಿಶ್ವ ದಾಖಲೆಯ ಪುಟ ಸೇರಿದೆ” ಎಂದಿದ್ದಾರೆ.
ಬಲ್ಲಿಯಾದ ರಾಶ್ರಾ ಉಪ ಜಿಲ್ಲೆಯ ಕೊಟ್ವಾರಿ ಗ್ರಾಮದ ನಿವಾಸಿ ನೇಹಾ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವೇದಿಕ ವಿಜ್ಞಾನದ ವಿದ್ಯಾರ್ಥಿನಿ. ಈ ಹಿಂದೆ ಅವರು ಬಿಎಚ್ಯುನಲ್ಲಿ ಲಲಿತಕಲೆ ಅಧ್ಯಯನ ಮಾಡಿದ್ದರು. ನವೆಂಬರ್ 18, 2020 ರಂದು ನೇಹಾ ಸಿಂಗ್ ಈ ದಾಖಲೆಯನ್ನು ಮಾಡಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಬಲ್ಲಿಯಾ ಡಿಎಂ ಶಾಹಿ ಅವರು ನೇಹಾ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದರು. ದಾಖಲೆಯ ಪತ್ರವನ್ನು ಹಸ್ತಾಂತರ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.