ನವದೆಹಲಿ: ಹರಿಯಾಣದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ರ ಭಾಗವಾಗಿ ನಾಲ್ಕು ಸ್ಥಳೀಯ ಕ್ರೀಡೆಗಳನ್ನು ಕ್ರೀಡಾಕೂಟಕ್ಕೆ ಸೇರಿಸಲು ಕ್ರೀಡಾ ಸಚಿವಾಲಯ ಅನುಮೋದನೆ ನೀಡಿದೆ. ಈ ನಾಲ್ಕು ಕ್ರೀಡೆಗಳೆಂದರೆ ಗಟ್ಕಾ, ಕಲರಿಪಯಟ್ಟು, ಥಾಂಗ್-ತಾ ಮತ್ತು ಮಲ್ಲಕಂಬ ಸೇರಿವೆ.
ಈ ನಿರ್ಧಾರದ ಕುರಿತು ಮಾತನಾಡಿದ ಕ್ರೀಡಾ ಸಚಿವ ಕಿರೆನ್ ರಿಜ್ಜು, ಭಾರತವು ಸ್ಥಳೀಯ ಕ್ರೀಡೆಗಳ ಶ್ರೀಮಂತ ಪರಂಪರೆಯನ್ನು ಹೊಂದಿದೆ ಮತ್ತು ಈ ಆಟಗಳನ್ನು ಸಂರಕ್ಷಿಸುವುದು, ಉತ್ತೇಜಿಸುವುದು ಮತ್ತು ಜನಪ್ರಿಯಗೊಳಿಸುವುದು ಕ್ರೀಡಾ ಸಚಿವಾಲಯದ ಆದ್ಯತೆಯಾಗಿದೆ. ಈ ಆಟಗಳ ಕ್ರೀಡಾಪಟುಗಳು ಸ್ಪರ್ಧಿಸಲು ಖೇಲೋ ಇಂಡಿಯಾ ಕ್ರೀಡಾಕೂಟಕ್ಕಿಂತ ಉತ್ತಮವಾದ ವೇದಿಕೆ ಇನ್ನೊಂದಿಲ್ಲ ಎಂದು ಅವರು ಹೇಳಿದರು.
ಈ ಆಟಗಳಿಗೆ ಭಾರಿ ಜನಪ್ರಿಯತೆ ಇದೆ ಮತ್ತು ಸ್ಟಾರ್ ಸ್ಪೋರ್ಟ್ಸ್ ಮೂಲಕ ಇದು ದೇಶಾದ್ಯಂತ ಪ್ರಸಾರವಾಗುತ್ತದೆ ಎಂದು ಸಚಿವರು ಹೇಳಿದರು. 2021 ರ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಯೋಗಾಸನ ಜೊತೆಗೆ ಈ ನಾಲ್ಕು ವಿಭಾಗಗಳು ಕ್ರೀಡಾ ಉತ್ಸಾಹಿಗಳು ಮತ್ತು ದೇಶದ ಯುವಜನರನ್ನು ಸೆಳೆಯುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ವರ್ಷಗಳಲ್ಲಿ ನಾವು ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಇನ್ನಷ್ಟು ಸ್ಥಳೀಯ ಕ್ರೀಡೆಗಳನ್ನು ಸೇರಿಸಲು ಸಾಧ್ಯವಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಆಯ್ದ ನಾಲ್ಕು ಆಟಗಳು ದೇಶದ ವಿವಿಧ ಭಾಗಗಳನ್ನು ಪ್ರತಿನಿಧಿಸುತ್ತವೆ. ಕಲರಿಪಯಟ್ಟು ಕೇರಳದ ಕ್ರೀಡೆ ಮತ್ತು ಪ್ರಪಂಚದಾದ್ಯಂತ ಇದು ಸಾಧಕರನ್ನು ಹೊಂದಿದೆ. ಮಲ್ಲಕಂಬ ಭಾರತದಾದ್ಯಂತ ಪ್ರಸಿದ್ಧವಾಗಿದೆ ಮತ್ತು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಈ ಕ್ರೀಡೆಯ ತಾಣಗಳಾಗಿವೆ. ಗಟ್ಕಾ ಪಂಜಾಬ್ನಲ್ಲಿ ಹುಟ್ಟಿಕೊಂಡಿದೆ ಮತ್ತು ನಿಹಾಂಗ್ ಸಿಖ್ ವಾರಿಯರ್ಸ್ನ ಈ ಸಾಂಪ್ರದಾಯಿಕ ಹೋರಾಟ ಶೈಲಿಯನ್ನು ಆತ್ಮರಕ್ಷಣೆ ಮತ್ತು ಕ್ರೀಡೆಯಾಗಿ ಬಳಸಲಾಗುತ್ತದೆ. ಇತ್ತೀಚಿನ ದಶಕಗಳಲ್ಲಿ ಮಣಿಪುರದ ಕಲೆ ಥಾಂಗ್-ತಾ ಅಳಿವಿನಂಚಿಗೆ ಸಾಗಿದೆ, ಆದರೆ ಖೆಲೋ ಇಂಡಿಯಾ ಯೂತ್ ಗೇಮ್ಸ್ 2021 ರ ಸಹಾಯದಿಂದ ಈ ಕ್ರೀಡೆಯು ಮತ್ತೆ ರಾಷ್ಟ್ರೀಯ ಮನ್ನಣೆಯನ್ನು ಪಡೆಯುವ ಹಾದಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.