ನವದೆಹಲಿ: ಮಹಿಳಾ ಉದ್ಯಮಿಗಳ ಜೊತೆಗೆ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ)ದ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯಡಿ ಈವರೆಗೆ 98,449 ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಸಂಬಂಧಪಟ್ಟ ಸಮುದಾಯಗಳಿಂದ ಉತ್ಪಾದನೆ, ಸೇವೆಗಳು ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಗ್ರೀನ್ಫೀಲ್ಡ್ ಉದ್ಯಮವನ್ನು ಸ್ಥಾಪಿಸಲು ಈ ಯೋಜನೆ ಉತ್ತೇಜಿಸುತ್ತದೆ.
ಯೋಜನೆಯಡಿ ಫಲಾನುಭವಿಗಳಿಗೆ 10 ಲಕ್ಷದಿಂದ 100 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ.
‘ಬ್ಯಾಂಕ್ ತಲುಪದವರತ್ತ ಬ್ಯಾಂಕಿಂಗ್’ ಉದ್ದೇಶದಿಂದ ಪ್ರಾರಂಭಿಸಲಾದ ಪ್ರಧಾನ್ ಮಂತ್ರಿ ಜನ ಧನ್ ಯೋಜನೆ (ಪಿಎಂಜೆಡಿವೈ) ಕೂಡ ಭಾರತೀಯ ನಾಗರಿಕರಿಗೆ ಕೈಗೆಟುಕುವ ಹಣಕಾಸು ಸೇವೆಗಳನ್ನು ಒದಗಿಸುವಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದೆ ಎಂದು ಹಣಕಾಸು ಸಚಿವಾಲಯದ ಟ್ವೀಟ್ ತಿಳಿಸಿದೆ.
ಪ್ರಗತಿಯ ಕುರಿತು ಪ್ರತಿಕ್ರಿಯಿಸಿದ ಎಎಸ್ಎಚ್ಎಂ ಪಾಲುದಾರ ಮತ್ತು ಅಸೋಸಿಯೇಟ್ಸ್ ಹನ್ಸ್ ರಾಜ್ ಚುಗ್, “ಕಾರ್ಯಾಚರಿಸುವ ಖಾತೆಯ ಸಂಖ್ಯೆಯು ಹೆಚ್ಚಾದಂತೆ, ದೇಶಾದ್ಯಂತದ ವಹಿವಾಟುಗಳ ಸಂಖ್ಯೆಯೂ ಹೆಚ್ಚಾಗುತ್ತದೆ, ಇದು ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ಸಕಾರಾತ್ಮಕ ಸೂಚಕವಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.