ವಾಷಿಂಗ್ಟನ್: ಶ್ವೇತಭವನದ ಸಂವಹನ ಮತ್ತು ಪತ್ರಿಕಾ ಸಿಬ್ಬಂದಿಯ ಹೆಚ್ಚುವರಿ ಸದಸ್ಯರನ್ನು ಅಮೆರಿಕಾದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಘೋಷಿಸಿದ್ದಾರೆ. ಭಾರತೀಯ-ಅಮೇರಿಕನ್ ವೇದಾಂತ್ ಪಟೇಲ್ ಅವರನ್ನು ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಪಟೇಲ್ ಪ್ರಸ್ತುತ ಬೈಡನ್ ಅವರ ಹಿರಿಯ ವಕ್ತಾರರಾಗಿದ್ದಾರೆ ಮತ್ತು ಬೈಡನ್ ಅಭಿಯಾನದ ಭಾಗವಾಗಿದ್ದಾರೆ ಮತ್ತು ಅವರು ಪ್ರಾದೇಶಿಕ ಸಂವಹನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಬೈಡನ್ ಅವರ ಪ್ರಾಥಮಿಕ ಅಭಿಯಾನದ ಸಮಯದಲ್ಲಿ, ಪಟೇಲ್ ನೆವಾಡಾ ಮತ್ತು ವೆಸ್ಟರ್ನ್ ಪ್ರೈಮರಿ-ಸ್ಟೇಟ್ಸ್ ಸಂವಹನ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಈ ಹಿಂದೆ ಅವರು ಭಾರತೀಯ-ಅಮೆರಿಕನ್ ಕಾಂಗ್ರೆಸ್ ವುಮನ್ ಪ್ರಮೀಲಾ ಜಯಪಾಲ್ ಅವರ ಸಂವಹನ ನಿರ್ದೇಶಕರಾಗಿ, ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿಯ ಪಾಶ್ಚಿಮಾತ್ಯ ಪ್ರಾದೇಶಿಕ ಪತ್ರಿಕಾ ಕಾರ್ಯದರ್ಶಿಯಾಗಿ ಮತ್ತು ಕಾಂಗ್ರೆಸ್ ಸದಸ್ಯ ಮೈಕ್ ಹೋಂಡಾಗೆ ಸಂವಹನ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಭಾರತದಲ್ಲಿ ಹುಟ್ಟಿ ಕ್ಯಾಲಿಫೋರ್ನಿಯಾದಲ್ಲಿ ಬೆಳೆದ ಪಟೇಲ್ ಕ್ಯಾಲಿಫೋರ್ನಿಯಾ-ರಿವರ್ಸೈಡ್ ಯೂನಿವರ್ಸಿಟಿ ಮತ್ತು ಫ್ಲೋರಿಡಾ ಯೂನಿವರ್ಸಿಟಿಯ ಪದವೀಧರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.