ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಹಿರಿಯ ನಾಗರಿಕರಿಗೆ ಮೂಲ ಶುಲ್ಕದಲ್ಲಿ 50% ರಿಯಾಯಿತಿ ನೀಡುವ ವಿಶೇಷ ಯೋಜನೆಯನ್ನು ಘೋಷಿಸಿದೆ. ಆದರೆ ಈ ಯೋಜನೆ ದೇಶೀಯ ವಿಮಾನಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಮಾತ್ರ ಈ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದಾರೆ.
ಏರ್ ಇಂಡಿಯಾ ಅಧಿಕೃತ ವೆಬ್ಸೈಟ್ನ ಪ್ರಕಾರ, ಏರ್ ಇಂಡಿಯಾ ಇದಕ್ಕಾಗಿ ಮಾನದಂಡವನ್ನು ರೂಪಿಸಿದೆ, ಇದಕ್ಕೆ ಹೊಂದಿಕೆಯಾಗುವ ಜನರಿಗೆ ಮಾತ್ರ ಈ ಆಫರ್ ಪಡೆಯಲು ಅವಕಾಶವಿದೆ.
ಭಾರತದಲ್ಲಿ ಶಾಶ್ವತವಾಗಿ ನೆಲೆಸಿರುವ ಭಾರತೀಯ ರಾಷ್ಟ್ರೀಯತೆ ಹೊಂದಿರುವ ಹಿರಿಯ ನಾಗರಿಕರು ಮತ್ತು ಪ್ರಯಾಣ ಪ್ರಾರಂಭದ ದಿನಾಂಕದಂದು 60 ವರ್ಷ ವಯಸ್ಸನ್ನು ಪೂರೈಸಿರುವ ಹಿರಿಯ ನಾಗರಿಕರು ಮಾತ್ರ ಈ ರಿಯಾಯಿತಿ ಪಡೆಯಬಹುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಎಕಾನಮಿ ಕ್ಯಾಬಿನ್ನಲ್ಲಿನ ಆಯ್ದ ಬುಕಿಂಗ್ ಕ್ಲಾಸ್ಗಳ ಮೂಲ ಶುಲ್ಕದಲ್ಲಿ ಮಾತ್ರ ಹಿರಿಯ ನಾಗರಿಕರಿಗೆ 50% ರಿಯಾಯಿತಿ ಲಭ್ಯವಿದೆ.
ಟಿಕೆಟ್ಗಳನ್ನು ಪ್ರಯಾಣದ ದಿನಾಂಕಕ್ಕಿಂತ ಮೂರು ದಿನಗಳ ಮೊದಲು ಖರೀದಿಸಬೇಕಾಗುತ್ತದೆ ಮತ್ತು ಆಫರ್ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ.
ಬುಕಿಂಗ್ ಸಮಯದಲ್ಲಿ ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಚಾಲನಾ ಪರವಾನಗಿ, ಏರ್ ಇಂಡಿಯಾ ನೀಡುವ ಹಿರಿಯ ನಾಗರಿಕರ ಗುರುತಿನ ಚೀಟಿ ಒದಗಿಸಬೇಕಾಗುತ್ತದೆ.
ಚೆಕ್ ಇನ್ ಸಮಯದಲ್ಲಿ ಅಥವಾ ಬೋರ್ಡಿಂಗ್ ಗೇಟ್ನಲ್ಲಿ ಸಂಬಂಧಿತ ಐಡಿ ಅಥವಾ ದಾಖಲೆಗಳನ್ನು ಪ್ರಸ್ತುತ ಪಡಿಸದಿದ್ದಲ್ಲಿ, ಟಿಕೆಟ್ ಹಿಂಪಡೆಯಲಾಗುತ್ತದೆ. ಬೋರ್ಡಿಂಗ್ ಅವಕಾಶ ನೀಡಲಾಗುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.