ಬೆಳ್ತಂಗಡಿ : ಕಂದಾಯ ಇಲಾಖೆ 2011 ರ ಮನೆ ತೆರಿಗೆಯನ್ನು ಕಡ್ಡಾಯ ಮಾಡುತ್ತಿರುವುದರಿಂದ ಹಲವಾರು ವರ್ಷಗಳಿಂದ ಮನೆ ಕಟ್ಟಿ ವಾಸ್ತವ್ಯವಿದ್ದು ಮನೆ ತೆರಿಗೆ ಇಲ್ಲದೆ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಹಲವಾರು ಫಲಾನುಭವಿಗಳು ಹಕ್ಕು ಪತ್ರ ಸಿಗದೆ ವಂಚಿತರಾಗುತ್ತಿದ್ದಾರೆ.
ಅದುದರಿಂದ ತಕರಾರು ಇಲ್ಲದ ಸರಕಾರಿ ಸ್ಥಳದಲ್ಲಿ ಮನೆ ಕಟ್ಟಿ ವಾಸ್ತ್ಯವಿದ್ದು ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಕ್ಕು ಪತ್ರ ನೀಡಬೇಕು ಎಂದು ತಾಲೂಕು ಬಿಜೆಪಿಯ ಹಿಂದುಳಿದ ವರ್ಗದ ಪ್ರ.ಕಾರ್ಯದರ್ಶಿ ಸುಧಾಕರ್ ಬಿಎಲ್ ಹಾಗೂ ಎಸ್.ಸಿ.ಮೋರ್ಚಾದ ಕೋಶಾಧಿಕಾರಿ ವಸಂತ ರಾಣೆ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿದ್ದಾರೆ.
ಈಚೆಗೆ ಸರಕಾರಿ ಸ್ಥಳದಲ್ಲಿ ಮನೆ ಕಟ್ಟಿ ಕುಳಿತವರಲ್ಲಿ 94ಸಿ ಕಾಯಿದೆಯಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕು ಪತ್ರ ನೀಡುತ್ತಿದ್ದು ಅರ್ಜಿ ಸಲ್ಲಿಸುವಾಗ ಫಲಾನುಭವಿಯ ವಿವರ ಹಾಗು ಭಾವಚಿತ್ರದೊಂದಿಗೆ ಮನೆಯ ಫೊಟೊ ಮತ್ತು ಸುತ್ತಳತೆಯ ವಿವರ ಮತ್ತು ಸರಕಾರಿ ಆರ್.ಟಿ.ಸಿ. ಲಗತ್ತಿಸಿದರೆ ಸಾಕು ಎಂದು ತಾಲೂಕು ಕೇಂದ್ರದಲ್ಲಿ ಸರಕಾರ ಜಾಹೀರಾತು ನೀಡಿದೆ.
ಇದರಿಂದ ಗೊಂದಲ ಉಮಟಾಗುತ್ತಿದೆ. ಇದೀಗ ಹಕ್ಕು ಪತ್ರ ನೀಡಬೇಕಾದಲ್ಲಿ 2011ರ ಮನೆ ತೆರಿಗೆ ಕಡ್ಡಾಯವಾಗಿ ಹಾಜರು ಪಡಿಸಲು ಸೂಚಿಸುತ್ತಿದ್ದಾರೆ. ಈ ಬಗ್ಗೆ ಜಾಹೀರಾತಿನಲ್ಲಿ ಮೊದಲೇ ಸೂಚಿಸುತ್ತಿದ್ದರೆ ಗೊಂದಲ ಮೂಡುತ್ತಿರಲಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.