ಪಣಜಿ: ಗೋವಾದ ಆಡಳಿತಾರೂಢ ಬಿಜೆಪಿ ಸೋಮವಾರ ಎರಡು ಜಿಲ್ಲಾ ಪಂಚಾಯತ್ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು. ಸ್ಪರ್ಧಿಸಿದ 42 ಸ್ಥಾನಗಳಲ್ಲಿ 33 ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. 38 ಸ್ಥಾನಗಳಲ್ಲಿ ಒಂದನ್ನು ಮಾತ್ರ ಕಾಂಗ್ರೆಸ್ಗೆ ಗೆಲ್ಲಲು ಸಾಧ್ಯವಾಯಿತು.
ಸಾಂಕ್ರಾಮಿಕ ರೋಗದ ಹೊರತಾಗಿಯೂ ಮತದಾನ ಮಾಡಿದ ಗೋವಾ ಜನತೆಯನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶ್ಲಾಘಿಸಿದರು, “ಜನರು ನಮ್ಮ ಮೇಲೆ ನಂಬಿಕೆ ತೋರಿಸಿದ್ದಾರೆ” ಎಂದು ಹೇಳಿದರು.
ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ್ ತನವಾಡೆ ಈ ಬಗ್ಗೆ ಹೇಳಿಕೆ ನೀಡಿ, “ವಿದ್ಯುತ್, ಡಬಲ್ ಟ್ರ್ಯಾಕಿಂಗ್ ಮತ್ತು ಕಲ್ಲಿದ್ದಲು ಸಾಗಣೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಸರ್ಕಾರದ ವಿರುದ್ಧ ಹಲವಾರು ಆಂದೋಲನಗಳನ್ನು ನಡೆಸಲಾಯಿತು. ಈ ಪ್ರತಿಭಟನೆಗಳನ್ನು ಪ್ರಾರಂಭಿಸಿದ ಎಲ್ಲಾ ಎನ್ಜಿಒಎಸ್, ರಾಜಕೀಯ ಪಕ್ಷಗಳು ಸರ್ಕಾರವನ್ನು ಕೆಣಕಲು ಪ್ರಯತ್ನಿಸಿದವು. ಆದರೆ ಚುನಾವಣೆ ಫಲಿತಾಂಶ ಅವರ ಮುಖಕ್ಕೆ ಕಪಾಳಮೋಕ್ಷ ಮಾಡಿದೆ ಮತ್ತು ಬಿಜೆಪಿಗೆ ಮೆಚ್ಚುಗೆಯ ಪ್ರಮಾಣಪತ್ರ ನೀಡಿದೆ” ಎಂದಿದ್ದಾರೆ.
“ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ನಾಯಕತ್ವದಲ್ಲಿ ರೈತರು, ಕಾರ್ಮಿಕರು, ವ್ಯಾಪಾರಿಗಳು, ಮಹಿಳೆಯರು ಮತ್ತು ಯುವಕರ ನಂಬಿಕೆಯನ್ನು ತೋರಿಸುತ್ತದೆ” ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಗೋವಾದ ಉಸ್ತುವಾರಿ ಸಿ ಟಿ ರವಿ ಹೇಳಿದ್ದಾರೆ.
We thank the people of Goa for their resounding endorsement of the politics of development envisioned by PM Shri @narendramodi.
We also congratulate every BJP karyakarta in Goa on this landslide victory in Zilla Panchayat Polls. pic.twitter.com/ewK7KUNNYG
— BJP (@BJP4India) December 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.