ಲಂಡನ್: ಹವಾಮಾನ ವೈಪರೀತ್ಯದಿಂದ ಜಗತ್ತು ಎದುರಿಸುತ್ತಿರುವ ತುರ್ತು ಪರಿಸ್ಥಿತಿಯು ಕರೋನವೈರಸ್ ಸಾಂಕ್ರಾಮಿಕಗಿಂತಲೂ ಹೆಚ್ಚು ವಿನಾಶಕಾರಿ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಅಲ್ಲದೇ ಅವರು ಸೌರಶಕ್ತಿ ಕ್ಷೇತ್ರದಲ್ಲಿ ಭಾರತ ಮಾಡುತ್ತಿರುವ ಅದ್ಭುತ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.
ಪ್ಯಾರಿಸ್ ಹವಾಮಾನ ಒಪ್ಪಂದದ ಐದನೇ ವಾರ್ಷಿಕೋತ್ಸವದ ನೆನಪಿಗಾಗಿ ಯುಕೆ ಸಹ-ಆತಿಥ್ಯ ವಹಿಸಿರುವ ಆಂಬಿಷಿಯಸ್ ಸಮಿಟ್ನಲ್ಲಿ ಭಾಷಣ ಮಾಡಿದ ಸಂದರ್ಭದಲ್ಲಿ ಜಾನ್ಸನ್ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ವರ್ಚುವಲ್ ಸಮಿಟ್ನಲ್ಲಿ ಭಾಗವಹಿಸಿದ್ದಾರೆ.
ಫೋಸಿಲ್ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ಯುಕೆ ಪ್ರತಿಜ್ಞೆಯನ್ನು ಬೋರಿಸ್ ಪುನರುಚ್ಚರಿಸಿದರು. ಭಾರತ, ಆಸ್ಟ್ರೇಲಿಯಾ ಅಥವಾ ಮೊರಾಕೊ ಮಾಡುತ್ತಿರುವ ಸಾಧನೆಗಳನ್ನು ಅನುಕರಿಸಲು ನಾವು ಆಶಿಸುತ್ತಿದ್ದೇವೆ ಮತ್ತು ಬೃಹತ್ ಸೌರ ಕಾರ್ಯಕ್ರಮದೊಂದಿಗೆ ಮುಂದುವರಿಯುತ್ತಿದ್ದೇವೆ ಎಂದು ಅವರು ಹೇಳಿದರು.
ಇಂಗಾಲದ ಹೊರಸೂಸುವಿಕೆ ತಟಸ್ಥವಾಗುವವರೆಗೆ ತಮ್ಮ ತಮ್ಮ ದೇಶಗಳಲ್ಲಿ ಹವಾಮಾನ ತುರ್ತು ಪರಿಸ್ಥಿತಿಯನ್ನು ಘೋಷಿಸುವಂತೆ ಅವರು ನಾಯಕರಿಗೆ ಒತ್ತಾಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.