ಮಂಗಳೂರು: ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 37.52 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸರ್ಜಿಕಲ್ ಕಟ್ಟಡ ಕಾಮಗಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದ್ದಾರೆ.
ದೇಶದಲ್ಲಿಯೇ ಮಂಗಳೂರು ನಗರವನ್ನು ನಂಬರ್ ಒನ್ ಮತ್ತು ಮಾದರಿ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಿಗೂ ಹೆಚ್ಚಿನ ವೇಗ ದೊರೆತಿದೆ ಎಂದು ಕಟೀಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದ ವೆನ್ಲಾಕ್ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸುವ ಸಲುವಾಗಿ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದ್ದು, ಶೀಘ್ರದಲ್ಲೇ ನೂತನ ಕಟ್ಟಡ ನಿರ್ಮಾಣದ ಜೊತೆಗೆ ಸಾರ್ವಜನಿಕರಿಗೆ ಮತ್ತಷ್ಟು ಪರಿಣಾಮಕಾರಿ ಸೇವೆ ನೀಡಲು ಮುಂದಾಗುವುದಾಗಿಯೂ ಕಟೀಲು ತಿಳಿಸಿದ್ದಾರೆ.
ಸದ್ಯ ಶಂಕುಸ್ಥಾಪನೆಯಾಗಿರುವ ನೂತನ ಕಟ್ಟಡದ ಯೋಜನೆಯು, 12,089 ಚ. ಮೀ. ವಿಸ್ತೀರ್ಣ ಹೊಂದಿದೆ. ಇದು ಐದು ಮಹಡಿಗಳನ್ನು ಹೊಂದಿರಲಿದ್ದು, ಸ್ಕ್ಯಾನಿಂಗ್, ಸ್ಕ್ಯಾನಿಂಗ್ ಘಟಕ, ವಿಕಿರಣ ಶಾಸ್ತ್ರ, ಲಾಂಡ್ರಿ, ಔಷಧಾಲಯ, ಆಲ್ಟ್ರಾ ಸೌಂಡ್, ಪ್ರತ್ಯೇಕ ಕ್ಲೀನಿಂಗ್ ವ್ಯವಸ್ಥೆ, ಪೋಸ್ಟ್ ಕಾರಿಡಾರ್, ಪ್ರೀ ಆಪರೇಟಿವ್, ಪೋಸ್ಟ್ ಆಪರೇಟಿವ್ ಮೊದಲಾದ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.