ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಪುಣೆ ಮೂಲದ ಸೇರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII)ವು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧಿ ದಿಗ್ಗಜ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಯನ್ನು ಗಮನಾರ್ಹವಾಗಿ ವಿಸ್ತರಿಸಲು ಸಜ್ಜಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಈ ಲಸಿಕೆಯ ಐದು ಕೋಟಿ ಡೋಸ್ಗಳನ್ನು ಈಗಾಗಲೇ ಉತ್ಪಾದಿಸಿರುವ ಆದರ್ ಪೂನವಾಲಾ ನೇತೃತ್ವದ ಸೇರಂ ಇನ್ಸ್ಟಿಟ್ಯೂಟ್ 2021 ರಿಂದ ಪ್ರತಿ ತಿಂಗಳು 10 ಕೋಟಿ ಡೋಸ್ ಲಸಿಕೆ ತಯಾರಿಸುವ ಗುರಿಯನ್ನು ಹೊಂದಿದೆ.
ಕಂಪನಿಯು ಈಗಾಗಲೇ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಪತ್ರ ಬರೆದು ತುರ್ತು ಬಳಕೆಗೆ ಲಸಿಕೆ ಬಳಸುವಂತೆ ಅನುಮತಿ ಕೇಳಿದೆ.
ಪೂನವಾಲಾ ನೀಡಿರುವ ವಿವರಗಳ ಪ್ರಕಾರ, ಸೇರಂ 2021 ರ ಅಂತ್ಯದ ವೇಳೆಗೆ ವರ್ಷಕ್ಕೆ 250 ಕೋಟಿ ಡೋಸ್ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಕೆಲಸ ಮಾಡುತ್ತಿದೆ. ಕಂಪನಿಯು ಈಗಾಗಲೇ ವಾರ್ಷಿಕವಾಗಿ 150 ಕೋಟಿ ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ವಿಶ್ವದ ಅತಿದೊಡ್ಡ ಲಸಿಕೆ ತಯಾರಕನಾಗಿರುವ ಸೇರಂಗೆ, ಕೋವಿಶೀಲ್ಡ್ ಷೇರುಗಳ ವಿತರಣೆಗೆ ಭಾರತವು ಆದ್ಯತೆಯ ಮಾರುಕಟ್ಟೆಯಾಗಲಿದೆ ಎಂದು ಪೂನವಾಲಾ ಈಗಾಗಲೇ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.