ನವದೆಹಲಿ: ಜಿಎಸ್ಟಿ ಇಂಟೆಲಿಜೆನ್ಸ್ನ ಡೈರೆಕ್ಟರೇಟ್ ಜನರಲ್ ಡಿಜಿಜಿಐಯು ದೇಶಾದ್ಯಂತದ ನಕಲಿ ಇನ್ವಾಯ್ಸ್ ವಂಚನೆಗಳ ವಿರುದ್ಧದ ಅಭಿಯಾನ ಆರಂಭಿಸಿದ್ದು, ಇದರಡಿ ಈವರೆಗೆ 140 ವಂಚಕ ವ್ಯಕ್ತಿಗಳನ್ನು ಬಂಧಿಸಿದೆ.
ಕಂದಾಯ ಇಲಾಖೆಯ ಮೂಲಗಳು ಈ ಬಗ್ಗೆ ಮಾಹಿತಿ ನೀಡಿದ್ದು, ನವೆಂಬರ್ ಎರಡನೇ ವಾರದಿಂದ ನಕಲಿ ಇನ್ವಾಯ್ಸ್ ವಂಚನೆಗಳ ವಿರುದ್ಧದ ಅಭಿಯಾನವನ್ನು ನಡೆಸಲಾಗುತ್ತಿದೆ. ಇದರಡಿ ಕಡಿಮೆ ಮೌಲ್ಯದ ಮತ್ತು ಲೆಕ್ಕವಿಲ್ಲದೆ ಸರಕುಗಳನ್ನು ಸಾಗಿಸುವ ಮೂಲಕ ಜಿಎಸ್ಟಿ ತಪ್ಪಿಸಿಕೊಂಡ ಪ್ರಕರಣಗಳನ್ನು ಕೂಡ ಪತ್ತೆ ಮಾಡಲಾಗಿದೆ. ಇದರಡಿ 4,839 ನಕಲಿ ಘಟಕಗಳ ವಿರುದ್ಧ 1,488 ಪ್ರಕರಣಗಳನ್ನು ದಾಖಲಿಸಲಾಗಿದೆ.
ದೆಹಲಿ ಮತ್ತು ಹಿಮಾಚಲದ ಕೆಲವು ಕಂಪನಿಗಳು ಸರಕುಗಳ ಕಡಿಮೆ ಮೌಲ್ಯಮಾಪನ ಮತ್ತು ಲುಧಿಯಾನ ಮತ್ತು ಜಲಂಧರ್ ರವಾನೆದಾರರ ಮೂಲಕ ಅದರ ಸಾಗಣೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿವೆ ಎಂದು ಮೂಲಗಳು ಬಹಿರಂಗಪಡಿಸಿವೆ. ಮುಖ್ಯವಾಗಿ ಪಾದರಕ್ಷೆಗಳು, ಪ್ಲಾಸ್ಟಿಕ್ ಸ್ಲೀಪರ್ಗಳು, ತಂಬಾಕು ಮತ್ತು ಶೇವಿಂಗ್ ವಸ್ತುಗಳು ಮುಂತಾದ ಸರಕುಗಳನ್ನು ಜಿಎಸ್ಟಿ ಪಾವತಿ ಮಾಡದೆ ಇವುಗಳು ಸಾಗಾಟ ಮಾಡುತ್ತಿವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.