ಕೊಚ್ಚಿ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತ ಚಲಾಯಿಸಲು ಹೋಗಿದ್ದ ಎರ್ನಾಕುಲಂನ ತ್ರಿಕ್ಕಕ್ಕರ ಪುರಸಭೆಯ ಮತಗಟ್ಟೆಯ ಮತದಾರರು ಗುರುವಾರ ಅಚ್ಚರಿಗೆ ಒಳಗಾಗಿದ್ದರು.
ಎರ್ನಾಕುಲಂ ಜಿಲ್ಲಾಡಳಿತವು ತ್ರಿಕ್ಕಕ್ಕರ ಸಮುದಾಯ ಭವನ ಮತದಾನ ಕೇಂದ್ರದಲ್ಲಿ ರೋಬೋಟ್ ಸ್ಥಾಪಿಸಿತ್ತು. ಸಯಾಬೊಟ್ ಎಂದು ಹೆಸರಿಸಲಾದ ಈ ರೋಬೋಟ್ ಮತದಾರರನ್ನು ಸ್ವಾಗತಿಸಿ, ಅವರ ದೇಹದ ತಾಪಮಾನವನ್ನು ಪರಿಶೀಲಿಸಿದೆ ಮತ್ತು ಮತ ಚಲಾಯಿಸುವ ಮೊದಲು ಅವರಿಗೆ ಸ್ಯಾನಿಟೈಸರ್ಗಳನ್ನು ನೀಡಿದೆ.
ರೋಬೋಟ್ ಕೆಲ ಮತದಾರರ ದೇಹದ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿನದಾಗಿದೆ ಎಂದು ಕಂಡುಬಂದ ಕೂಡಲೆ ದೊಡ್ಡ ಘೋಷಣೆಯನ್ನು ಮಾಡಿದೆ ಮತ್ತು ಆ ಮತದಾರರಿಗೆ ಮತದಾನ ಅಧಿಕಾರಿಯನ್ನು ಸಂಪರ್ಕಿಸುವಂತೆ ಸಲಹೆ ನೀಡಿದೆ. ಮಾಸ್ಕ್ ಸರಿಯಾಗಿ ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಕೋವಿಡ್ ಪ್ರೋಟೋಕಾಲ್ ಅನ್ನು ಕಾಪಾಡಿಕೊಳ್ಳಲು ಇದು ಮತದಾರರಿಗೆ ಸಲಹೆಯನ್ನು ಕೂಡ ನೀಡಿದೆ.
ಈ ರೋಬೋಟ್ ಅನ್ನು ಪ್ರಾಯೋಗಿಕ ಆಧಾರದ ಮೇಲೆ ಅಲ್ಲಿ ನಿಯೋಜನೆ ಮಾಡಲಾಗಿದೆ ಮತ್ತು ಅದರ ಕಾರ್ಯಕ್ಷಮತೆಯ ಆಧಾರದ ಮೇಲೆ ಅದನ್ನು ಇತರ ಸ್ಥಳಗಳಲ್ಲಿ ನಿಯೋಜಿಸಲಾಗುವುದು ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.