ವಾಷಿಂಗ್ಟನ್: ಅಮೆರಿಕಾದ ನಾಸಾ ಆಯೋಜನೆಗೊಳಿಸಿರುವ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಮಿಷನ್ಗೆ ಭಾರತೀಯ ಮೂಲದ ಗಗನಯಾತ್ರಿ ಆಯ್ಕೆಯಾಗಿದ್ದಾರೆ. ರಾಜಾ ಜಾನ್ ವರ್ಪುತೂರ್ ಚಾರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಾಸಾ ಟ್ವಿಟ್ ಮಾಡಿದೆ.
ರಾಜಾ ಜಾನ್ ವರ್ಪುತೂರ್ ಚಾರಿ ಅವರು ಅಮೆರಿಕದ ವಾಯುಸೇನೆಯಲ್ಲಿ ಕರ್ನಲ್ ಆಗಿದ್ದಾರೆ.
ನಾಸಾ 2024ರಲ್ಲಿ ಮಾನವಸಹಿತ ಚಂದ್ರಯಾನ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಮಿಷನ್ಗೆ ಈಗಾಗಲೇ ನಾಸಾ 9 ಮಹಿಳೆಯರು ಹಾಗೂ 9 ಪುರುಷರನ್ನೊಳಗೊಂಡ 18 ಗಗನಯಾತ್ರಿಗಳ ತಂಡವನ್ನು ರಚಿಸಿದೆ. ಅವರನ್ನು ಕೂಡ ಆರಿಸಿದೆ.
ಯುಎಸ್ ಏರ್ ಫೋರ್ಸ್ ಅಕಾಡೆಮಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮತ್ತು ಯುಎಸ್ ನೇವಲ್ ಟೆಸ್ಟ್ ಪೈಲಟ್ ಶಾಲೆಯಲ್ಲಿ ಪದವಿ ಪಡೆದಿರುವ 43 ವರ್ಷದ ರಾಜಾ ಚಾರಿ ಈ ತಂಡದಲ್ಲಿರುವ ಏಕೈಕ ಭಾರತೀಯ-ಅಮೇರಿಕನ್ ಆಗಿದ್ದಾರೆ.
👨✈️ Pilot with 2,000 hours of flight time
🇺🇸 @USAirForce officer
👨🚀 NASA AstronautMeet @Astro_Raja, an initial member of our @NASAArtemis team who will help pave the way for the next human missions on and around the Moon. pic.twitter.com/bc6ctjUL5H
— NASA Aeronautics (@NASAaero) December 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.