ಪುಣೆ: ಶಿರಿಡಿ ಸಾಯಿಬಾಬಾ ಮಂದಿರ ಹೊರಗೆ ʼಸಭ್ಯ ಉಡುಗೆಗಳನ್ನು ತೊಟ್ಟು ಬನ್ನಿʼ ಎಂದು ಹಾಕಿದ ಬೋರ್ಡ್ಗಳನ್ನು ತೆಗೆದುಹಾಕಲು ತನ್ನ ಸಂಗಡಿಗರೊಡನೆ ಶಿರಡಿಗೆ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತ ತೃಪ್ತಿ ದೇಸಾಯಿಯನ್ನು ಅಹಮದ್ನಗರದಲ್ಲಿ ಮಹಾರಾಷ್ಟ್ರ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
ವಿವಾದಾತ್ಮಕ ಸಂದೇಶವನ್ನು ಹೊತ್ತ ಬೋರ್ಡ್ಗಳನ್ನು ತೆಗೆದುಹಾಕದಿದ್ದರೆ, ತಾನು ಮತ್ತು ಇತರ ಕಾರ್ಯಕರ್ತರು ಶಿರಡಿಗೆ ಹೋಗಿ ಡಿಸೆಂಬರ್ 10 ರಂದು ಅವುಗಳನ್ನು ಕಿತ್ತು ಹಾಕುತ್ತೇವೆ ಎಂದು ದೇಸಾಯಿ ಈ ಹಿಂದೆ ಎಚ್ಚರಿಸಿದ್ದಳು.
ಮಂಗಳವಾರ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಶಿರಡಿ ಪ್ರದೇಶ) ಗೋವಿಂದ್ ಶಿಂಧೆ, ಕಾನೂನು ಸುವ್ಯವಸ್ಥೆ ಉಲ್ಲೇಖಿಸಿ ತೃಪ್ತಿ ದೇಸಾಯಿ ಅವರಿಗೆ ನೋಟಿಸ್ ನೀಡಿ, ಡಿಸೆಂಬರ್ 8 ಮಧ್ಯರಾತ್ರಿಯಿಂದ ಡಿಸೆಂಬರ್ 11 ಮಧ್ಯರಾತ್ರಿಯವರೆಗೆ ಅಹಮದನಗರ ಜಿಲ್ಲೆಯ ಶಿರಡಿಗೆ ಪ್ರವೇಶಿಸಬಾರದು ಎಂದು ಸೂಚಿಸಿದ್ದರು.
ಆದರೆ, ನೋಟಿಸ್ ಅನ್ನು ಧಿಕ್ಕರಿಸಿ ದೇಸಾಯಿ ಮತ್ತು 20 ಇತರ ಸದಸ್ಯರನ್ನು ಒಳಗೊಂಡ ‘ಭೂಮಾತಾ ಬ್ರಿಗೇಡ್’ ಗುರುವಾರ ಬೆಳಿಗ್ಗೆ ಪುಣೆಯಿಂದ ಹೊರಟು ಸಾಯಿಬಾಬಾ ದೇವಸ್ಥಾನದಲ್ಲಿರುವ ಬೋರ್ಡ್ಗಳನ್ನು ತೆಗೆಯಲು ಶಿರಡಿಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಆಕೆಯನ್ನು ವಶಕ್ಕೆ ಪಡೆದಿರುವುದನ್ನು ಸಂಭ್ರಮಿಸಿ ಕೆಲವರು ಪಟಾಕಿ ಹೊಡೆದಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.