ನವದೆಹಲಿ: ಸಂಸತ್ ಭವನದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು. ಹಲವು ಅರ್ಚಕರ ಮಂತ್ರ ಘೋಷಗಳ ಪಠಣದೊಂದಿಗೆ ಭೂಮಿ ಪೂಜೆ ಕಾರ್ಯ ನೆರವೇರಿತು.
ಈ ಕಟ್ಟಡವು ಸುಮಾರು 60 ಸಾವಿರ ಚದರ ಮೀ. ವಿಸ್ತೀರ್ಣ ಹೊಂದಿರಲಿದೆ. ಈ ಭವನದಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಕೊಠಡಿಗಳಿರಲಿವೆ. ಜೊತೆಗೆ ಕಾಗದ ರಹಿತ ಕಛೇರಿ ಹೊಂದಿರಲಿದೆ, ಇಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. 971 ಕೋಟಿ ರೂಪಾಯಿ ವೆಚ್ಚದಲ್ಲಿ ಇದು ನಿರ್ಮಾಣವಾಗಲಿದೆ ಎಂದು ಅಂದಾಜಿಸಲಾಗಿದೆ.
ಭೂಕಂಪ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. 2000 ಮಂದಿ ನೇರವಾಗಿ ಮತ್ತು 9000 ಮಂದಿ ಪರೋಕ್ಷವಾಗಿ ನಿರ್ಮಾಣ ಕಾರ್ಯದಲ್ಲಿ ತೊಡಗಲಿದ್ದಾರೆ.
ಸಂವಿಧಾನ ಸಭಾಂಗಣ, ಸಂಸತ್ ಸದಸ್ಯರಿಗೆ ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಅನೇಕ ಸಮಿತಿ ಕೊಠಡಿಗಳು, ಡೈನಿಂಗ್, ಪಾರ್ಕಿಂಗ್ ವ್ಯವಸ್ಥೆಯನ್ನು ಇದು ಒಳಗೊಳ್ಳಲಿದೆ. ಹೊಸ ಸಂಸತ್ ಭವನದ ಲೋಕಸಭೆಯಲ್ಲಿ 888 ಸದಸ್ಯರಿಗೆ ಆಸನ, ರಾಜ್ಯಸಭೆಯ ಮೇಲ್ಮನೆ ಸದಸ್ಯರಿಗೆ 384 ಆಸನ ಸಾಮರ್ಥ್ಯ ಹೊಂದಿರಲಿದೆ.
ಇದರ ಕಾಮಗಾರಿ 2022 ರ ಹೊತ್ತಿಗೆ ಸಂಪೂರ್ಣವಾಗುವ ನಿರೀಕ್ಷೆ ಇದೆ.
Delhi: Foundation stone laying ceremony of the new Parliament building is underway.
Tata Trusts’ Chairman Ratan Tata, Union Minister HS Puri, Dy Chairman of Rajya Sabha Harivansh & various religious leaders also present
Tata Projects Ltd has been given contract for the project pic.twitter.com/geeGWik99N
— ANI (@ANI) December 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.