ನವದೆಹಲಿ: ಪಾಕಿಸ್ಥಾನವು ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಚೀನಾಗೆ ಬಲವಂತವಾಗಿ ಮಾರಾಟ ಮಾಡುತ್ತಿದೆ ಎಂದು ಅಮೆರಿಕಾದ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ಉನ್ನತ ಅಧಿಕಾರಿ ಸ್ಯಾಮ್ಯುಯೆಲ್ ಬ್ರೌನ್ಬ್ಯಾಕ್ ಆರೋಪಿಸಿದ್ದಾರೆ.
ಚೀನಾದ ಪುರುಷರಿಗೆ ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಬಲವಂತವಾಗಿ ಮದುವೆ ಮಾಡಿಕೊಡಲಾಗುತ್ತಿದೆ ಎಂದಿದ್ದಾರೆ.
“ಪಾಕಿಸ್ಥಾನದ ಧಾರ್ಮಿಕ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ ಮತ್ತು ಹಿಂದೂ ಮಹಿಳೆಯರನ್ನು ಚೀನಿಯರಿಗೆ ಉಪಪತ್ನಿಯರಾಗಿ ಮಾರಾಟ ಮಾಡಲಾಗುತ್ತಿದೆ ಮತ್ತು ಚೀನಾಕ್ಕೆ ವಧುಗಳಂತೆ ಬಲವಂತವಾಗಿ ಅವರನ್ನು ಕಳುಹಿಸಲಾಗುತ್ತಿದೆ” ಎಂದು ಬ್ರೌನ್ಬ್ಯಾಕ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರಿಗೆ ಪರಿಣಾಮಕಾರಿಯಾದ ಬೆಂಬಲವಿಲ್ಲ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಅಲ್ಲಿ ತಾರತಮ್ಯವಿದೆ, ಹೀಗಾಗಿ ಮಹಿಳೆಯರನ್ನು ಹೆಚ್ಚು ದುರ್ಬಲಗೊಳಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಪಾಕಿಸ್ಥಾನವನ್ನು ನಿರ್ದಿಷ್ಟ ಕಾಳಜಿಯ ದೇಶವಾಗಿ (ಸಿಪಿಸಿ) ಘೋಷಿಸಲು ಇದು ಒಂದು ಕಾರಣ ಎಂದು ಅವರು ಹೇಳಿದ್ದಾರೆ.
ದಶಕಗಳಿಂದ ಚೀನಾ ಹೇರಿದ ಒನ್-ಚೈಲ್ಡ್ ನೀತಿಯಿಂದಾಗಿ, ಹುಡುಗರಿಗೆ ಆದ್ಯತೆಯನ್ನು ಅಲ್ಲಿನ ಮಹಿಳೆಯರು ನೀಡದ ಕಾರಣ ಚೀನಾದ ಪುರುಷರು ಇತರ ದೇಶಗಳಿಂದ ಮಹಿಳೆಯರನ್ನು ವಧು, ಪ್ರೇಯಸಿ ಮತ್ತು ಕೆಲಸದವರಾಗಿ ಆಮದು ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.