ಜೈಪುರ: ರಾಜಸ್ಥಾನದ ಪಂಚಾಯತ್ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ. ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿದೆ.
ಬಿಜೆಪಿಯು ರಾಜಸ್ಥಾನದ 4,371 ಪಂಚಾಯತ್ ಸಮಿತಿ ಕ್ಷೇತ್ರಗಳಲ್ಲಿ 1,835 ಗೆದ್ದಿದೆ ಮತ್ತು 11 ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ ಬಹುಮತವನ್ನು ದಾಟಲು ಯಶಸ್ವಿಯಾಗಿದೆ. 636 ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ 312 ಸ್ಥಾನವನ್ನು ಗೆದ್ದುಕೊಂಡಿದೆ. ಮಂಗಳವಾರ ರಾತ್ರಿ 11.40 ಕ್ಕೆ ರಾಜಸ್ಥಾನ ರಾಜ್ಯ ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಟಿಸಿದ ಅಂಕಿಅಂಶಗಳ ಆಧಾರದ ಮೇಲೆ ಫಲಿತಾಂಶ ಬಂದಿದೆ.
222 ಪಂಚಾಯತ್ ಸಮಿತಿಗಳಲ್ಲಿ ಬಿಜೆಪಿ 1,835 ವಾರ್ಡ್ಗಳನ್ನು ಗೆದ್ದರೆ, ಕಾಂಗ್ರೆಸ್ 1,718 ವಾರ್ಡ್ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 422 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದರೆ, ಆರ್ಎಲ್ಪಿ 56 ಕ್ಷೇತ್ರಗಳನ್ನು ಗಳಿಸಿದೆ. ಸಿಪಿಎಂ 16 ಕ್ಷೇತ್ರಗಳಲ್ಲಿ, ಬಿಎಸ್ಪಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಜಿಲ್ಲಾ ಪರಿಷತ್ ಚುನಾವಣೆಯಲ್ಲಿ, 21 ಜಿಲ್ಲಾ ಪರಿಷತ್ನ 636 ಕ್ಷೇತ್ರಗಳ ಪೈಕಿ 597 ಫಲಿತಾಂಶಗಳನ್ನು ರಾತ್ರಿ 11.40 ಕ್ಕೆ ಘೋಷಿಸಲಾಗಿದ್ದು, ಬಿಜೆಪಿ 312 ಕ್ಷೇತ್ರಗಳನ್ನು ಗೆದ್ದಿದೆ ಮತ್ತು ಕಾಂಗ್ರೆಸ್ 239 ಸ್ಥಾನಗಳನ್ನು ಗಳಿಸಿದೆ. ಬಿಜೆಪಿ ಮಿತ್ರ ಆರ್ಎಲ್ಪಿ 10 ಸ್ಥಾನಗಳನ್ನು ಗಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.