ವಾಷಿಂಗ್ಟನ್: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಹಾಯ ಪಡೆಯುವ ಸಲುವಾಗಿ ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಅವರು ಇಬ್ಬರು ಮಾಜಿ ಅಧ್ಯಕ್ಷ ಒಬಾಮಾ ಆಡಳಿತ ಇಬ್ಬರು ಅಧಿಕಾರಿಗಳನ್ನು ಮಹತ್ವದ ಪಾತ್ರಗಳಿಗಾಗಿ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಜೆಫ್ ಝೆಯೆಂಟ್ಸ್ ಅವರನ್ನು ಶ್ವೇತ ಭವನದ ಕೊರೊನಾ ವೈರಸ್ ಸಂಯೋಜಕರಾಗಿ ನೇಮಕ ಮಾಡಲಾಗಿದೆ ಎಂದು ಗುರುವಾರ ವರದಿಗಳು ಹೇಳಿವೆ.
ಬೈಡೆನ್ ಸಲಹೆಗಾರ ವಿವೇಕ್ ಮೂರ್ತಿ ಅವರು ಸರ್ಜನ್ ಜನರಲ್ ಪಾತ್ರಕ್ಕೆ ಮರಳಲಿದ್ದಾರೆ. ಮಾತ್ರವಲ್ಲದೇ, ದೇಶದಾದ್ಯಂತ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿರುವುದರಿಂದ ವಿಶಾಲವಾದ ಪಾತ್ರವನ್ನು ಅವರಿಗೆ ವಹಿಸಲಾಗಿದೆ ಎಂದು ಹೇಳಲಾಗಿದೆ.
ಜನವರಿ 20 ರಂದು ಅಧಿಕಾರ ವಹಿಸಿಕೊಂಡ ನಂತರಕೊರೋನಾ ವೈರಸ್ ಮತ್ತು ಆರ್ಥಿಕ ಕುಸಿತವನ್ನು ನಿಭಾಯಿಸುವುದು ಬೈಡೆನ್ ಅವರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.
ಮೂರ್ತಿ ಅವರು ಕರ್ನಾಟಕ ಮೂಲದವರಾಗಿದ್ದು, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದ್ದಾರೆ ಮತ್ತು ಯೇಲ್ ವಿಶ್ವವಿದ್ಯಾಲಯದಲ್ಲಿ ಎಂಡಿ ಮತ್ತು ಎಂಬಿಎ ವ್ಯಾಸಂಗ ಮಾಡಿದ್ದಾರೆ. ಅವರು ಬೋಸ್ಟನ್ನ ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ತಮ್ಮ ಇಂಟರ್ನಲ್ ಮೆಡಿಸಿನ್ ರೆಸಿಡೆನ್ಸಿಯನ್ನು ಪೂರ್ಣಗೊಳಿಸಿದರು ಮತ್ತು ನಂತರ ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲಿ ಇಂಟರ್ನಲ್ ಮೆಡಿಸಿನ್ ಅಧ್ಯಾಪಕರಾಗಿ ಸೇರಿದರು.
ಮೂರ್ತಿ 15 ಡಿಸೆಂಬರ್ 2014 ರಿಂದ 21 ಏಪ್ರಿಲ್ 2017 ರವರೆಗೆ ಬರಾಕ್ ಒಬಾಮಾ ಆಡಳಿತದಲ್ಲಿ 19 ನೇ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸಿದರು. ನಂತರ ಅವರನ್ನು ಟ್ರಂಪ್ ಆಡಳಿತದಲ್ಲಿ ಕೆಳಗಿಳಿಯುವಂತೆ ಮಾಡಲಾಯಿತು. ಇದೀಗ ಮತ್ತೆ ಅವರು ಬೈಡನ್ ಆಡಳಿತದಲ್ಲಿ ಮಹತ್ವದ ಪಾತ್ರ ನಿಭಾಯಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.