ನಾಸಿಕ್: ಕ್ರಿಮಿನಲ್ ಹಿನ್ನಲೆ ಇರುವ ಅರ್ಚಕರನ್ನು, ಸ್ವಾಮೀಜಿಗಳು ನಾಸಿಕ್ ಕುಂಭಮೇಳಕ್ಕೆ ಪ್ರವೇಶಿಸದಂತೆ ಅಖಿಲ ಭಾರತೀಯ ಆಖರ ಪರಿಷದ್ ನಿರ್ಬಂಧ ಹೇರಿದೆ. ಕುಂಭ ಮೇಳದ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಈ ನಿರ್ಬಂಧ ಹೇರಲಾಗಿದೆ.
ಮೊನ್ನೆ ತಾನೇ ಸಚ್ಚಿದಾನಂದ ಎಂಬ ಬಾರ್ ಮಾಲೀಕರೊಬ್ಬರು ಸ್ವಾಮೀಜಿಯಾಗಿ ದೀಕ್ಷೆ ಪಡೆದಿದ್ದರು, ಅವರ ಹೆಸರು ಇತರ ಕ್ರಿಮಿನಲ್ ಪ್ರಕರಣಗಳಲ್ಲೂ ಕೇಳಿ ಬಂದಿತ್ತು. ಇದೀಗ ಅವರಿಗೆ ಕುಂಬ ಮೇಳಕ್ಕೆ ಆಗಮಿಸುವುದಕ್ಕೆ ನಿಷೇಧ ಹೇರಲಾಗಿದೆ. ಈ ಸಂಗತಿಯನ್ನು ಅಖರ ಪರಿಷದ್ ಸ್ಪಷ್ಟಪಡಿಸಿದೆ.
ಸಚ್ಚಿದಾನಂದ ಅವರು ಈ ಹಿಂದೆ ಸಚಿನ್ ದತ್ತ ಆಗಿದ್ದರು, ಎನ್ಸಿಆರ್ ಸಮೀಪ ಅವರಿಗೆ ಬಾರ್ ಇದೆ. ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.