ನವದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಧರ್ಮೇಂದ್ರ ಪ್ರಧಾನ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 100 ಆಕ್ಟೇನ್ ಪ್ರೀಮಿಯಂ ಪೆಟ್ರೋಲ್ ಅನ್ನು ನಿನ್ನೆ ಬಿಡುಗಡೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಕಲ್ಪಿಸಿರುವ ಪರಿಸರ ಸ್ನೇಹಿ ಇಂಧನದ ಬಿಡುಗಡೆಯು ನಾಗರಿಕರಿಗೆ ಸುಲಲಿತ ಜೀವನ ಸಾಗಿಸಲು ಅನುಕೂಲವಾಗುವಂತೆ ಮಾಡುವ ನಿಟ್ಟುನಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಎಂದು ಪ್ರಧಾನ್ ಬಣ್ಣಿಸಿದರು.
ವರದಿಯ ಪ್ರಕಾರ, ಎಕ್ಸ್ಪಿ -100 ಬ್ರಾಂಡ್ ಅಡಿಯಲ್ಲಿ ಹೆಚ್ಚಿನ ಆಕ್ಟೇನ್ ಪ್ರೀಮಿಯಂ ದರ್ಜೆಯ ಪೆಟ್ರೋಲ್ ಮೊದಲ ಹಂತದಲ್ಲಿ ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ 10 ನಗರಗಳಲ್ಲಿ ಲಭ್ಯವಾಗಲಿದೆ. ಎರಡನೇ ಹಂತದಲ್ಲಿ ಕೋಲ್ಕತಾ ಮತ್ತು ಚೆನ್ನೈನಂತಹ ಇನ್ನೂ 5 ನಗರಗಳು ಸೇರ್ಪಡೆಯಾಗಲಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಎಕ್ಸ್ಪಿ -100 ಅನ್ನು ಸ್ಥಳೀಯ ತಾಂತ್ರಿಕ ಜ್ಞಾನದೊಂದಿಗೆ ಅಭಿವೃದ್ಧಿಪಡಿಸುವುದರೊಂದಿಗೆ, ಭಾರತವು ಅಂತಹ ಸೂಪರ್ ಗ್ರೇಡ್ ಇಂಧನವನ್ನು ಹೊಂದಿರುವ ರಾಷ್ಟ್ರಗಳ ಆಯ್ದ ಲೀಗ್ಗೆ ಸೇರ್ಪಡೆಗೊಂಡಿದೆ. ಆಕ್ಟೇನ್ ರೇಟಿಂಗ್ಗಳು ಇಂಧನ ಸ್ಥಿರತೆಯ ಅಳತೆಗಳಾಗಿದ್ದು ಅದು ಎಂಜಿನ್ ದಕ್ಷತೆಯನ್ನು ಹೆಚ್ಚಿಸುತ್ತದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.