ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಕಾರ್ಯಾಚರಿಸಿದ್ದ ವಿಶೇಷ ರೈಲು ಸೇವೆಯನ್ನು ಡಿಸೆಂಬರ್ ಅಂತ್ಯದವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಸಂಬಂಧಿಸಿದಂತೆ ಈ ಸೇವೆಯನ್ನು ಆರಂಭ ಮಾಡಲಾಗಿತ್ತು. ಕೆಎಸ್ಆರ್ ಬೆಂಗಳೂರು, ಜೋಧಪುರ ಮಧ್ಯೆ ವಾರದಲ್ಲಿ 2 ಬಾರಿ ಸಂಚಾರ ನಡೆಸುವ ರೈಲು ಸೇವೆಯನ್ನು ಡಿಸೆಂಬರ್ ಅಂತ್ಯದ ವರೆಗೆ ವಿಸ್ತರಣೆ ಮಾಡಲಾಗಿದೆ. ಜೋಧಪುರ, ಕೆಎಸ್ಆರ್ ರೈಲು ಸೇವೆಯನ್ನು 2021 ರ ಜನವರಿ 2 ರ ವರೆಗೆ ವಿಸ್ತರಿಸಿ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ. ಅದರಂತೆ ಮೈಸೂರು, ಅಜ್ಮೀರ್ ನಡುವೆ ವಾರಕ್ಕೆ 2 ಬಾರಿ ಸಂಚಾರ ಒದಗಿಸುತ್ತಿದ್ದ ರೈಲು ಸೇವೆಯನ್ನು ಡಿ. 31 ರ ವರೆಗೆ ಮತ್ತು ಅಜ್ಮೀರ್, ಮೈಸೂರು ನಡುವಿನ ರೈಲು ಸೇವೆಯನ್ನು ಜ. 3,2021 ರ ವರೆಗೂ ವಿಸ್ತರಿಸಲಾಗಿದೆ.
ಅದರಂತೆ ಮೈಸೂರು, ಟ್ಯಟಿರಿಕಾನ್, ಕೆಎಸ್ಆರ್ ಬೆಂಗಳೂರು, ಕನ್ಯಾಕುಮಾರಿ ನಡುವಿನ ಪ್ರತಿದಿನ ಸಂಚಾರ ನಡೆಸುವ ರೈಲು, ಭುವನೇಶ್ವರ, ಬೆಂಗಳೂರು ಕಂಟೋನ್ಮೆಂಟ್ ಪ್ರತಿ ದಿನದ ರೈಲು, ಭಾನುವಾರದ ರೈಲು ಸೇವೆಯನ್ನು ಸಹ ವಿಸ್ತರಣೆ ಮಾಡಲಾಗಿದೆ. ಇನ್ನು ವಿಶೇಷ ರೈಲುಗಳ ಪ್ರಯಾಣಕ್ಕೆ ಹತ್ತು ದಿನ ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಬೇಕು. ಅದರಂತೆ ವಿಶೇಷ ರೈಲುಗಳ ಪ್ರಯಾಣ ದರವನ್ನೇ ಟಿಕೆಟ್ಗೆ ನೀಡಬೇಕು. ಅದರೊಂದಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪ್ರಯಾಣಿಕರು ಪಾಲನೆ ಮಾಡಬೇಕು ಎಂದು ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.