ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.
ಡಿ. 12 ರ ವರೆಗೆ ದಾಖಲಾತಿ ಅವಧಿಯನ್ನು ವಿಸ್ತರಣೆ ಮಾಡಿ ಶಿಕ್ಷಣ ಪದವಿ ಪೂರ್ವ ಇಲಾಖೆ ಆದೇಶಿಸಿದೆ. ಈ ಹಿಂದೆ ನ. 27 ರಂದು ಪ್ರಥಮ ಪಿಯುಸಿ ದಾಖಲಾತಿಗೆ ಕೊನೆಯ ದಿನ ಎಂದು ಆದೇಶವನ್ನು ಇಲಾಖೆ ಹೊರಡಿಸಿತ್ತು. ಇದೀಗ ಪರಿಷ್ಕರಣೆ ಮಾಡಿ, ದಾಖಲಾತಿ ಅವಧಿ ವಿಸ್ತರಣೆ ಮಾಡಲಾಗಿದೆ.
ರಾಜ್ಯದಲ್ಲಿನ ಎಲ್ಲಾ ಪಿಯು ಕಾಲೇಜುಗಳು, ಸೂಚನಾ ಫಲಕದಲ್ಲಿ ಮತ್ತು ಕಾಲೇಜಿನ ವೆಬ್ಸೈಟ್ನಲ್ಲಿ ಇಲಾಖೆಯಿಂದ ಅನುಮತಿ ಪಡೆದ ಸಂಯೋಜನೆವಾರು, ರೋಸ್ಟರ್ವಾರು ಪ್ರವೇಶಗಳ ಮಾಹಿತಿಯನ್ನು ನೀಡುವಂತೆಯೂ ಇಲಾಖೆ ಆದೇಶ ನೀಡಿದೆ. ಜೊತೆಗೆ ದಾಖಲಾತಿ ಶುಲ್ಕಗಳ ವಿವರಗಳನ್ನು ಪ್ರಕಟಿಸುವಂತೆಯೂ ತಿಳಿಸಿದೆ. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳ ಮಾಹಿತಿಯನ್ನು ಸಹ ಪ್ರಕಟಿಸಬೇಕು ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.