ಮಡಿಕೇರಿ: ಕೊಡಗಿನ ಹುಡುಗ ಚೋಳಂಡ ವರುಣ್ ಗಣಪತಿ ಅವರು ಭಾರತೀಯ ಭೂ ಸೇನೆಯಲ್ಲಿ ಒಂದು ವರ್ಷದ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ‘ಸಾರ್ಡ್ ಆಫ್ ಹಾನರ್’ ಮತ್ತು ರಾಷ್ಟ್ರಪತಿಗಳ ಚಿನ್ನದ ಪದಕದ ಜೊತೆಗೆ ಲೆಫ್ಟಿನೆಂಟ್ ಪದವಿಗೇರಿದ್ದಾರೆ.
ಚೆನ್ನೈನಲ್ಲಿ ನಡೆದ ಆಫೀಸರ್ ಟ್ರೈನಿಂಗ್ ಅಕಾಡೆಮಿಯ ಆವರಣದಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್ನಲ್ಲಿ ಈ ಗೌರವವನ್ನು ವರುಣ್ ಮುಡಿಗೇರಿಸಿಕೊಂಡಿದ್ದಾರೆ. ಇವರು ಜನವರಿಯಲ್ಲಿ ನಡೆದ ವಾಯುಪಡೆಯ ತರಬೇತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವಾಯುಪಡೆಗೆ ಆಯ್ಕೆಯಾಗಿದ್ದರು.
ಇವರು ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್, ಮೈಸೂರಿನ ರಾಮಕೃಷ್ಣ ವಿದ್ಯಾ ಶಾಲೆ, ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಿದ್ದಾರೆ. ವರುಣ್ ಚಿಕ್ಕಬಳ್ಳಾಪುರದಲ್ಲಿ ಲೋಕಾಯುಕ್ತ ಎಸ್ಪಿ ಆಗಿರುವ ಚೋಳಂಡ ಪೂವಯ್ಯ ಮತ್ತು ಧರಣಿ ಪೂವಯ್ಯ ದಂಪತಿ ಪುತ್ರ.
ವರುಣ್ ಈ ಹಿಂದೆ ‘ಖಡ್ಗ ಗೌರವಕ್ಕೆ’ ಪಾತ್ರರಾದ ಕರ್ನಲ್ ಪಟ್ಟದ ಎನ್. ತಿಮ್ಮಯ್ಯ, ಲೆಫ್ಟಿನೆಂಟ್ ಜನರಲ್ ಪಟ್ಟಚೆರುವಂಡ ಸಿ. ತಿಮ್ಮಯ್ಯ, ಸ್ಕ್ವಾ.ಲೀ. ಮಲ್ಲೇಂಗಡ ಬಿ. ಚಿಟ್ಟಿಯಪ್ಪ ಮತ್ತು ಲೆ| ಕಮಾಂಡರ್ ಮುಕ್ಕಾಟೀರ ಸೂರಜ್ ಅಯ್ಯಪ್ಪ ಅವರ ವಿಶೇಷ ಸಾಧನೆಯ ಪಟ್ಟಿಯಲ್ಲಿಯೂ ಸೇರಿದ್ದಾರೆ. ಖಡ್ಗ ಗೌರವ ಮತ್ತು ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದ ಸಾಧಕರಲ್ಲಿ ಎರಡನೇಯವರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.