ನವದೆಹಲಿ: ಅರುಣಾಚಲ ಪ್ರದೇಶ ಚೀನಾದ ಭಾಗ ಎನ್ನುವ ಚೀನಾದ ಸುದೀರ್ಘ ಸಮಯದ ಬೇಡಿಕೆಯನ್ನು ಅರುಣಾಚಲಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಅವರು ಮತ್ತೊಮ್ಮೆ ನಿರಾಕರಿಸಿದ್ದಾರೆ. ಅಲ್ಲದೇ, ಅರುಣಾಚಲ ಟಿಬೆಟ್ ಜೊತೆಗೆ ಗಡಿ ಹಂಚಿಕೊಂಡಿದೆಯೇ ಹೊರತು ಚೀನಾದೊಂದಿಗೆ ಅಲ್ಲ ಎಂದಿದ್ದಾರೆ.
“ಅರುಣಾಚಲವು ಚೀನಾದೊಂದಿಗೆ ನೇರ ಗಡಿಯನ್ನು ಹಂಚಿಕೊಂಡಿಲ್ಲ ಆದರೆ ಟಿಬೆಟ್ನೊಂದಿಗೆ ಹಂಚಿಕೊಂಡಿದೆ” ಎಂದು ಅವರು ಹೇಳಿದ್ದಾರೆ. ಇತಿಹಾಸವನ್ನು ಯಾರೂ ಅಳಿಸಲು ಸಾಧ್ಯವಿಲ್ಲ ಮತ್ತು ಚೀನಾ ಟಿಬೆಟ್ ಅನ್ನು ಅಕ್ರಮವಾಗಿ ಆಕ್ರಮಿಸಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಚೀನಾಗೆ ಅರುಣಾಚಲ ಮುಖ್ಯಮಂತ್ರಿ ದಿಟ್ಟ ಪ್ರತ್ಯುತ್ತರ ನೀಡುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಅವರು ಚೀನಾವನ್ನು ಕುಟುಕಿದ್ದಾರೆ.
ಚೀನಾದಂತಹ ಪ್ರತಿಕೂಲ ನೆರೆಹೊರೆಯವರು ಭಾರತದ ಕುತ್ತಿಗೆ ಹಿಸುಕುವ ಪ್ರಯತ್ನ ಮಾಡುತ್ತಿದ್ದರೆ, ಕೇಂದ್ರವು ಗಡಿಯುದ್ದಕ್ಕೂ ಇರುವ ಗಡಿನಾಡಿನ ಹೆದ್ದಾರಿಯಲ್ಲಿ ರಸ್ತೆ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದೆ. ಈ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.