ಇಸ್ಲಾಮಾಬಾದ್: 1,300 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾದ ಹಿಂದೂ ದೇವಾಲಯವನ್ನು ಪಾಕಿಸ್ಥಾನ ಮತ್ತು ಇಟಾಲಿಯನ್ ಪುರಾತತ್ವ ತಜ್ಞರು ವಾಯುವ್ಯ ಪಾಕಿಸ್ಥಾನದ ಸ್ವಾತ್ ಜಿಲ್ಲೆಯ ಪರ್ವತವೊಂದರಲ್ಲಿ ಪತ್ತೆ ಮಾಡಿದ್ದಾರೆ. ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸಿದಾಗ ಈ ಪುರಾತನ ದೇಗುಲ ಪತ್ತೆಯಾಗಿದೆ.
ಗುರುವಾರ ಈ ಬಗ್ಗೆ ಪ್ರಕಟಿಸಿದ ಖೈಬರ್ ಪಖ್ತುನ್ಖ್ವಾ ಪುರಾತತ್ವ ವಿಭಾಗದ ಫಝಲ್ ಖಲಿಕ್ ಅವರು, ಪತ್ತೆಯಾದ ದೇವಾಲಯವು ವಿಷ್ಣುವಿನದ್ದಾಗಿದೆ. ಇದನ್ನು ಹಿಂದೂ ಶಾಹಿ ಅವಧಿಯಲ್ಲಿ 1,300 ವರ್ಷಗಳ ಹಿಂದೆ ಹಿಂದೂಗಳು ನಿರ್ಮಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಿಂದೂ ಶಾಹಿ ಅಥವಾ ಕಾಬೂಲ್ ಶಾಹಿ (ಕ್ರಿ.ಶ. 8501026) ಕಾಬೂಲ್ ಕಣಿವೆ (ಪೂರ್ವ ಅಫ್ಘಾನಿಸ್ಥಾನ), ಗಾಂಧಾರ (ಆಧುನಿಕ ಪಾಕಿಸ್ಥಾನ) ಮತ್ತು ಇಂದಿನ ವಾಯುವ್ಯ ಭಾರತವನ್ನು ಆಳಿದ ಹಿಂದೂ ರಾಜವಂಶವಾಗಿದೆ. ತಮ್ಮ ಉತ್ಖನನದ ಸಮಯದಲ್ಲಿ, ಪುರಾತತ್ತ್ವಜ್ಞರು ದೇವಾಲಯದ ಸ್ಥಳದ ಬಳಿ ಕಂಟೋನ್ಮೆಂಟ್ ಮತ್ತು ವಾಚ್ಟವರ್ಗಳ ಕುರುಹುಗಳನ್ನು ಸಹ ಕಂಡುಹಿಡಿದಿದ್ದಾರೆ.
ದೇವಾಲಯದ ಸ್ಥಳದ ಬಳಿ ತಜ್ಞರು ವಾಟರ್ ಟ್ಯಾಂಕ್ ಅನ್ನು ಪತ್ತೆ ಮಾಡಿದ್ದಾರೆ, ಇದನ್ನು ಹಿಂದೂಗಳು ಪೂಜಿಸುವುದಕ್ಕೂ ಸ್ನಾನ ಮಾಡಲು ಬಳಸುತ್ತಿದ್ದರು ಎಂದು ಅಂದಾಜಿಸಲಾಗಿದೆ. ಸ್ವಾತ್ ಜಿಲ್ಲೆಯು ಸಾವಿರ ವರ್ಷಗಳಷ್ಟು ಹಳೆಯದಾದ ಪುರಾತತ್ವ ಸ್ಥಳಗಳಿಗೆ ನೆಲೆಯಾಗಿದೆ ಮತ್ತು ಹಿಂದೂ ಶಾಹಿ ಕಾಲದ ಕುರುಹುಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಕಂಡುಬಂದಿವೆ ಎಂದು ಖಲೀಕ್ ಹೇಳಿದ್ದಾರೆ.
ಸ್ವಾತ್ ಜಿಲ್ಲೆಯಲ್ಲಿ ಪತ್ತೆಯಾದ ಗಾಂಧಾರ ನಾಗರಿಕತೆಯ ಮೊದಲ ದೇವಾಲಯ ಇದಾಗಿದೆ ಎಂದು ಇಟಾಲಿಯನ್ ಪುರಾತತ್ವ ಕಾರ್ಯಾಚರಣೆಯ ಮುಖ್ಯಸ್ಥ ಡಾ.ಲುಕಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.