ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೊ ಬೈಡನ್ ಅವರು ತಮ್ಮ ಪತ್ನಿ ಅಮೆರಿಕದ ಮೊದಲ ಮಹಿಳೆಯಾಗಲಿರುವ ಜಿಲ್ಲ್ ಬೈಡನ್ ಅವರ ಯೋಜನಾ ನಿರ್ದೇಶಕಿಯಾಗಿ ಭಾರತೀಯ ಮೂಲದ ಮಾಲಾ ಅಡಿಗ ಅವರನ್ನು ನೇಮಕ ಮಾಡಿದ್ದಾರೆ.
ಈ ಮೊದಲು ಜಿಲ್ಲ್ ಬೈಡನ್ ಅವರ ಹಿರಿಯ ಸಲಹೆಗಾರ್ತಿಯಾಗಿಯೂ ಮಾಲಾ ಕಾರ್ಯನಿರ್ವಹಿಸಿದ್ದರು. ಅದರೊಂದಿಗೆ ಚುನಾವಣೆಯ ಸಂದರ್ಭದಲ್ಲಿ ಬೈಡನ್, ಕಮಲಾ ಹ್ಯಾರಿಸ್ ಅವರ ಪರ ಚುನಾವಣಾ ಪ್ರಚಾರದಲ್ಲಿಯೂ ಹಿರಿಯ ಯೋಜನಾ ಸಲಹೆಗಾರ್ತಿಯಾಗಿ ಕೆಲಸ ಮಾಡಿದ್ದರು. ಹಾಗೆಯೇ ಬೈಡನ್ ಫೌಂಡೇಶನ್ನ ಉನ್ನತ ಶಿಕ್ಷಣ ಮತ್ತು ಮಿಲಿಟರಿ ಫ್ಯಾಮಿಲೀಸ್ನ ನಿರ್ದೇಶಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬರಾಕ್ ಒಬಾಮಾ ಅವರ ಆಡಳಿತಾವಧಿಯಲ್ಲಿ ಮಾಲಾ ಅವರು ಬ್ಯೂರೋ ಆಫ್ ಎಜುಕೇಶನ್ ಮತ್ತು ಕಲ್ಚರಲ್ ಅಫೇರ್ಸ್ನ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉಪ ಸಹಾಯಕ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ.
ಮಾಲಾ ಅವರು ಅಮೆರಿಕದ ನೊಯಿಸ್ ಮೂಲದವರಾಗಿದ್ದು, ಗ್ರಿನ್ನ್ ವೆಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮಿನ್ನೆಸೊಟಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಯುನಿವರ್ಸಿಟಿ ಆಫ್ ಚಿಕಾಗೋ ಲಾ ಸ್ಕೂಲ್ನಲ್ಲಿ ವಕೀಲ ಪದವಿ ಪಡೆದಿದ್ದಾರೆ. 2008 ರಲ್ಲಿ ಬರಾಕ್ ಒಬಾಮಾ ಸರ್ಕಾರದ ಅವಧಿಯಲ್ಲಿ ಅಸೋಸಿಯೇಟ್ ಅಟಾರ್ನಿ ಜನರಲ್ಗೆ ಲಾಯರ್ ಆಗಿಯೂ ಕಾರ್ಯ ನಿರ್ವಹಿಸಿದ ಅನುಭವ ಮಾಲಾ ಅಡಿಗರದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.