ಇಸ್ಲಾಮಾಬಾದ್: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ಗೆ ಎರಡು ಭಯೋತ್ಪಾದನೆ ಪ್ರಕರಣಗಳಲ್ಲಿ ಪಾಕಿಸ್ಥಾನದ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಭಯೋತ್ಪಾದಕ ಗುಂಪು ಲಷ್ಕರ್-ಎ-ತೋಯ್ಬಾ (ಎಲ್ಇಟಿ)ದ ಅಂಗ ಸಂಘಟನೆಯಾದ ಜಮಾತ್ ಉದ್ ದವಾದ ಮುಖ್ಯಸ್ಥ ಹಫೀಜ್ ಸಯೀದ್ಗೆ ಭಯೋತ್ಪಾದನೆ ಪ್ರಕರಣದಲ್ಲಿ ಪಾಕಿಸ್ಥಾನದ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು ಇದೇ ಮೊದಲಲ್ಲ. ಫೆಬ್ರವರಿಯಲ್ಲಿ, ಭಯೋತ್ಪಾದನಾ ಹಣಕಾಸು ಪ್ರಕರಣದಲ್ಲಿ ಹಫೀಜ್ ಸಯೀದ್ ಮತ್ತು ಆತನ ಕೆಲವು ಸಹಾಯಕರು ಶಿಕ್ಷೆಗೊಳಗಾಗಿದ್ದರು ಮತ್ತು 11 ವರ್ಷಗಳ ಜೈಲು ಶಿಕ್ಷೆಯನ್ನು ಇವರಿಗೆ ವಿಧಿಸಲಾಗಿತ್ತು.
2008 ರಲ್ಲಿ ಮುಂಬೈನಲ್ಲಿ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಈತ ಭಾರತಕ್ಕೆ ಅತ್ಯಂತ ಬೇಕಾದ ಉಗ್ರನಾಗಿದ್ದಾನೆ. ಹಫೀಜ್ ಸಯೀದ್ ಅನ್ನು ವಿಶ್ವಸಂಸ್ಥೆ ಮತ್ತು ಯುಎಸ್ “ಜಾಗತಿಕ ಭಯೋತ್ಪಾದಕ” ಎಂದು ಘೋಷಿಸಿದೆ. ಇದರಿಂದ ಆತನ ತಲೆಯ ಮೇಲೆ 10 ಮಿಲಿಯನ್ ಡಾಲರ್ ಬಹುಮಾನವಿದೆ.
ಭಯೋತ್ಪಾದನೆ-ಹಣಕಾಸು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಜುಲೈನಲ್ಲಿ ಪಾಕಿಸ್ಥಾನದಲ್ಲಿ ಹಫೀಜ್ ಸಯೀದ್ ಅನ್ನು ಬಂಧಿಸಲಾಗಿತ್ತು.
ಆದರೆ ಜಗತ್ತಿನ ಕಣ್ಣಿಗೆ ಪಾಕಿಸ್ಥಾನ ಆತನಿಗೆ ಶಿಕ್ಷೆಯನ್ನು ವಿಧಿಸುವ ನಾಟಕ ಮಾಡುತ್ತಿದೆಯೇ ಅಥವಾ ಪ್ರಾಮಾಣಿಕ ಕ್ರಮ ಕೈಗೊಳ್ಳುತ್ತಿದೆಯೇ ಎಂಬುದನ್ನು ಕಾಲವೇ ಹೇಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.