ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಯಿಂದ ಪ್ರೇರಿತಗೊಂಡು ಮೊಬೈಲ್ ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಿ ಟೆಕ್ನೋ-ಚಾಲೆಂಜ್ 2015 ಪ್ರಶಸ್ತಿಯನ್ನು ಗೆದ್ದ ಬಾಲಕಿಯರನ್ನು ಮೋದಿ ನವದೆಹಲಿಯಲ್ಲಿ ಮಂಗಳವಾರ ಭೇಟಿಯಾದರು.
ಕರ್ನಾಟಕದ ನ್ಯೂ ಹಾರಿಝಾನ್ ಎಜುಕೇಶನಲ್ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿಗಳು ಇವರಾಗಿದ್ದು, ಇತ್ತೀಚಿಗಷ್ಟೇ ಅಮೆರಿಕಾದಲ್ಲಿ ನಡೆದ ಟೆಕ್ನೋ-ಚಾಲೆಂಜ್ 2015 ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದರು.
ತ್ಯಾಜ್ಯ ಮಾರಾಟಗಾರರು ಮತ್ತು ವ್ಯಾಪಾರ ಮಾಡುವವರನ್ನು ಪರಸ್ಪರ ಸಂಪರ್ಕಿಸಲು ಸಹಕಾರಿಯಾಗುವ ಮೊಬೈಲ್ ಆ್ಯಪ್ ನ್ನು ಈ ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿದ್ದರು.
ಈ ಮಕ್ಕಳ ಭವಿಷ್ಯಕ್ಕೆ ಮೋದಿ ಶುಭಕೋರಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದ ಪ್ರಹ್ಲಾದ್ ಜೋಶಿ ಭೇಟಿಯ ವೇಳೆ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.