ವಿಶೇಷ ಮೈಕ್ರೋ ಕ್ರೆಡಿಟ್ ಸೌಲಭ್ಯ ಯೋಜನೆಯಾದ ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮ-ನಿರ್ಭರ ನಿಧಿ (ಪಿಎಂ-ಸ್ವನಿಧಿ) ಬೀದಿ ಬದಿ ವ್ಯಾಪಾರಿಗಳಿಗೆ ವರದಾನವಾಗಿ ಪರಿಣಮಿಸಿದೆ. ಈ ಯೋಜನೆ ಅಡಿಯಲ್ಲಿ ಇದುವರೆಗೆ 27.13 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ, 14.16 ಲಕ್ಷಕ್ಕೂ ಅಧಿಕ ಸಾಲ ಮಂಜೂರು ಮಾಡಲಾಗಿದೆ. 1,411.77 ಕೋಟಿ ರೂಪಾಯಿ ಮೊತ್ತದ ಸಾಲ ಬಿಡುಗಡೆ ಮಾಡಲಾಗಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಯೋಜನೆಯಡಿಯಲ್ಲಿ, ಕೋವಿಡ್ -19 ಲಾಕ್ ಡೌನ್ ಕಾರಣದಿಂದ ತಮ್ಮ ಸ್ಥಳೀಯ ಊರುಗಳಿಗೆ ತೆರಳಿದ್ದ ಮಾರಾಟಗಾರರು ಹಿಂದಿರುಗಿದ ನಂತರ ಸಾಲಕ್ಕೆ ಅರ್ಹರಾಗಿರುತ್ತಾರೆ.
ಉತ್ತರಪ್ರದೇಶದಿಂದ 6.5 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅದರಲ್ಲಿ ಸುಮಾರು 3.27 ಲಕ್ಷ ಮಂಜೂರಾಗಿದೆ ಮತ್ತು 1.87 ಲಕ್ಷ ಸಾಲಗಳನ್ನು ವಿತರಿಸಲಾಗಿದೆ. ಯುಪಿಯಲ್ಲಿ ಸ್ವನಿಧಿ ಯೋಜನೆಯ ಸಾಲ ಒಪ್ಪಂದಕ್ಕೆ ಸ್ಟಾಂಪ್ ಡ್ಯೂಟಿ ವಿನಾಯಿತಿ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಯಾವುದೇ ಸಾಮಾನ್ಯ ಸೇವಾ ಕೇಂದ್ರ ಅಥವಾ ಪುರಸಭೆಯ ಕಚೇರಿಯಲ್ಲಿ ಅಥವಾ ಬ್ಯಾಂಕ್ನಲ್ಲಿ ಆನ್ಲೈನ್ನಲ್ಲಿ ಅರ್ಜಿಯನ್ನು ಸ್ವಂತವಾಗಿ ಅಪ್ಲೋಡ್ ಮಾಡಿಕೊಳ್ಳುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಮೂಲಕ ಸಾಲ ಒದಗಿಸುವುದು ತೊಂದರೆಯಿಲ್ಲದ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ ಎಂದು ಸಚಿವಾಲಯ ಹೇಳಿದೆ.
ಬ್ಯಾಂಕುಗಳು ಕೂಡ ವ್ಯಾಪಾರಿಗಳಿಗೆ ಉದ್ಯಮವನ್ನು ಪ್ರಾರಂಭಿಸಲು ಸಹಾಯ ಮಾಡುವ ಸಲುವಾಗಿ ಯೋಜನೆಯಡಿ ಸಾಲವನ್ನು ಒದಗಿಸಲು ಜನರ ಮನೆ ಬಾಗಿಲಿಗೆ ತಲುಪುತ್ತಿವೆ ಎಂಬುದು ಗಮನಾರ್ಹ ಬೆಳವಣಿಗೆ.
ಯೋಜನೆಯ ಅನುಷ್ಠಾನದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ. ರಸ್ತೆ ಬದಿ ಮಾರಾಟಗಾರರ ಸಂಘಗಳು, ವ್ಯಾಪಾರಿ ಏಜೆಂಟ್ಗಳು (ಬಿಸಿಗಳು), ಬ್ಯಾಂಕ್ ಏಜೆಂಟರು, ಸೂಕ್ಷ್ಮ ಹಣಕಾಸು ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳುಮತ್ತು ಅದರ ಒಕ್ಕೂಟಗಳು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರ ಜಾಲವನ್ನು ಸ್ಥಳೀಯ ಸಂಸ್ಥೆಗಳು ನಿಯಂತ್ರಿಸುತ್ತಿವೆ. ಅಲ್ಲದೆ, ಡಿಜಿಟಲ್ ಪಾವತಿ ಅಗ್ರಿಗೇಟರ್ಗಳಾದ ಬಿಎಚ್ಐಎಂ, ಪೇಟಿಎಂ, ಗೂಗಲ್ಪೇ, ಭಾರತ್ಪೇ, ಅಮೆಜಾನ್ ಪೇ, ಫೋನ್ಪೇ ಇತ್ಯಾದಿಗಳು ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸ್ಥಿರತೆಯೊಂದಿಗೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು, ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ನೊಂದಿಗೆ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಅಭಿವೃದ್ಧಿಪಡಿಸಲಾಗಿದೆ, ಈ ಯೋಜನೆಯನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಇದು ಸಹಾಯಕವಾಗಿದೆ.
ಐಟಿ ಪ್ಲಾಟ್ಫಾರ್ಮ್ ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಕ್ರೆಡಿಟ್ ನಿರ್ವಹಣೆಗಾಗಿ ಎಸ್ಐಡಿಬಿಐನ ಉದ್ಯಮಿಮಿತ್ರಾ ಪೋರ್ಟಲ್ ಮತ್ತು ಬಡ್ಡಿ ಸಬ್ಸಿಡಿಯನ್ನು ಸ್ವಯಂಚಾಲಿತವಾಗಿ ನಿರ್ವಹಿಸಲು MoHUAದ ಪೈಸಾ ಪೋರ್ಟಲ್ನೊಂದಿಗೆ ಸಂಯೋಜಿಸಲಾಗಿದೆ.
ಈ ಯೋಜನೆಯು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತದೆ, ಅಂದರೆ ಯುಪಿಐ, ಪಾವತಿ ಅಗ್ರಿಗೇಟರ್ಗಳ ಕ್ಯೂಆರ್-ಕೋಡ್, ರುಪೇ ಪೇ ಡೆಬಿಟ್ ಕಾರ್ಡ್ಗಳು ಮುಂತಾದ ಡಿಜಿಟಲ್ ವಿಧಾನಗಳನ್ನು ಬಳಸಿಕೊಂಡು ರಶೀದಿಗಳು ಮತ್ತು ಪಾವತಿಗಳನ್ನು ಬೀದಿ ಬದಿ ವ್ಯಾಪಾರಿಗಳು ಮಾಸಿಕ ಕ್ಯಾಶ್ ಬ್ಯಾಕ್ ಮೂಲಕ ಪಡೆಯುತ್ತಾರೆ.
ಸ್ವನಿಧಿ ಯೋಜನೆಯ ಮೂಲಕ ಸಾಲ ಪಡೆದ ಹೆಚ್ಚಿನ ಬೀದಿ ಬದಿ ವ್ಯಾಪಾರಿಗಳು ತಮ್ಮ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಿದ್ದಾರೆ. ಸ್ಮಾಲ್-ಟೈಮ್ ಸಾಲಗಾರರು ತಮ್ಮ ಪ್ರಾಮಾಣಿಕತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.