ಲಂಡನ್: ಯುಕೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಂಪಸ್ ಕ್ಯಾಂಟೀನ್ಗಳಲ್ಲಿ ಗೋಮಾಂಸ ಮತ್ತು ಕುರಿಮಾಂಸವನ್ನು ನಿಷೇಧಿಸುವ ಪರವಾಗಿ ಮತ ಚಲಾಯಿಸಿದ್ದಾರೆ. ಹವಾಮಾನ ಬದಲಾವಣೆಯ ಸಮಸ್ಯೆಯನ್ನು ನಿಭಾಯಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸ್ಟುಡೆಂಟ್ಸ್ ಕೌನ್ಸಿಲ್ನಲ್ಲಿ ವಿದ್ಯಾರ್ಥಿ ಸಂಘವು ಮೂರನೇ ಎರಡರಷ್ಟು ಬಹುಮತದಿಂದ ಈ ನಿರ್ಣಯವನ್ನು ಅಂಗೀಕರಿಸಿದೆ. ಆದರೆ ಈ ನಿರ್ಧಾರವು ಗೋಮಾಂಸ ಮತ್ತು ಕುರಿಮಾಂಸವನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಬಯಸುವ ಇತರ ಕಾಲೇಜುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಮಾಂಸ ಉದ್ಯಮದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ಎದುರಿಸಲು ಯುಕೆಯಲ್ಲಿನ ಅನೇಕ ವಿಶ್ವವಿದ್ಯಾನಿಲಯಗಳು ಸಸ್ಯಾಹಾರವನ್ನು ಆಯ್ಕೆ ಮಾಡಿವೆ. ಈ ಬೆಳವಣಿಗೆಯ ನಂತರ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಈ ನಿರ್ಧಾರ ಹೊರಬಿದ್ದಿದೆ.
ಈಗಾಗಲೇ ಗೋಲ್ಡ್ಸ್ಮಿತ್ಸ್, ಲಂಡನ್ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಗೋಮಾಂಸ ನಿಷೇಧವನ್ನು ಪರಿಚಯಿಸಿವೆ.
ಆಕ್ಸ್ಫರ್ಡ್ ಕ್ಯಾಂಟೀನ್ನಲ್ಲಿ ಹೊಸದಾಗಿ ಪರಿಚಯಿಸಲಾದ ನಿಷೇಧದ ನಂತರ, ಕ್ಯಾಂಪಸ್ನಲ್ಲಿರುವ ಗ್ರಂಥಾಲಯಗಳು ಮತ್ತು ಇತರ ವಿಶ್ವವಿದ್ಯಾಲಯ ಕಟ್ಟಡಗಳು ಸೇರಿದಂತೆ ಇತರ ಸ್ಥಳಗಳಲ್ಲಿ ಮಾಂಸವನ್ನು ನಿಷೇಧಿಸಲು ಸ್ಟುಡೆಂಟ್ ಯೂನಿಯನ್ ಮುಂದೆ ನೋಡುತ್ತಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.