ನವದೆಹಲಿ: ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ನ ಮೊದಲ ಅಧ್ಯಕ್ಷರಾಗಿ ಸೇನಾಪತಿ (ಕ್ರಿಸ್) ಗೋಪಾಲಕೃಷ್ಣನ್ ಅವರು ನೇಮಕವಾಗಿದ್ದಾರೆ. ಗೋಪಾಲಕೃಷ್ಣನ್ ಅವರು ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಮಾಜಿ ಸಹ-ಅಧ್ಯಕ್ಷ ಆಗಿದ್ದವರು.
ತಂತ್ರಜ್ಞಾನದ ಮೇಲೆ ಪ್ರಭಾವ ಬೀರುವ ಮೂಲಕ ಮತ್ತು ಹೊಸತನವನ್ನು ಸುಗಮಗೊಳಿಸುವ ಮತ್ತು ಬೆಳೆಸುವಂತಹ ವಾತಾವರಣವನ್ನು ಸೃಷ್ಟಿಸುವ ಮೂಲಕ ಹಣಕಾಸು ಕ್ಷೇತ್ರದಾದ್ಯಂತ ಹೊಸತನವನ್ನು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ (RBIH) ಅನ್ನು ಸ್ಥಾಪಿಸುವುದಾಗಿ ಆಗಸ್ಟ್ನಲ್ಲಿ ಘೋಷಿಸಿತ್ತು.
“ರಿಸರ್ವ್ ಬ್ಯಾಂಕ್ RBIHನ ಮೊದಲ ಅಧ್ಯಕ್ಷರಾಗಿ ಇನ್ಫೋಸಿಸ್ನ ಸಹ-ಸಂಸ್ಥಾಪಕ ಮತ್ತು ಮಾಜಿ ಸಹ-ಅಧ್ಯಕ್ಷರಾದ ಸೇನಾಪತಿ (ಕ್ರಿಸ್) ಗೋಪಾಲಕೃಷ್ಣನ್ ಅವರನ್ನು ನೇಮಕ ಮಾಡಲಾಗಿದೆ” ಎಂದು ಆರ್ಬಿಐ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಗೋಪಾಲಕೃಷ್ಣನ್ ಪ್ರಸ್ತುತ ಸ್ಟಾರ್ಟ್ ಅಪ್ ವಿಲೇಜ್ ಮುಖ್ಯ ಮಾರ್ಗದರ್ಶಕರಾಗಿದ್ದಾರೆ, ಇದು ಸ್ಟಾರ್ಟ್ಅಪ್ಗಳ ಇನ್ಕ್ಯುಬೇಷನ್ ಕೇಂದ್ರವಾಗಿದೆ.
ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ ಹಣಕಾಸು ವಲಯದ ಸಂಸ್ಥೆಗಳು, ತಂತ್ರಜ್ಞಾನ ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಕರಿಸುತ್ತದೆ ಮತ್ತು ವಿಚಾರ ವಿನಿಮಯ ಮತ್ತು ಆರ್ಥಿಕ ಆವಿಷ್ಕಾರಗಳಿಗೆ ಸಂಬಂಧಿಸಿದ ಮೂಲಮಾದರಿಗಳ ಅಭಿವೃದ್ಧಿಯ ಪ್ರಯತ್ನಗಳನ್ನು ಸಂಘಟಿಸುತ್ತದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.