ವಾಷಿಂಗ್ಟನ್: ದೀಪಾವಳಿಯ ಸಂಭ್ರಮ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಮನೆಮಾಡಿದೆ. ಅಮೆರಿಕದ ಐಕಾನಿಕ್ ಎಂಪೈರ್ ಸ್ಟೇಟ್ ಬಿಲ್ಡಿಂಗ್ನಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೇಸರಿ ಲೈಟಿಂಗ್ ಜಗಮಗಿಸಿದೆ.
ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್ ಪ್ರದೇಶಗಳನ್ನು ಒಳಗೊಂಡ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ ಮತ್ತು ಎಂಪೈರ್ ಸ್ಟೇಟ್ ಬಿಲ್ಡಿಂಗ್ ಜೊತೆಗೂಡಿ ಕಟ್ಟಡವನ್ನು ಕೇಸರಿ ದೀಪದಿಂದ ಬೆಳಗಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಅಧಿಕೃತ ಟ್ವಿಟರ್ ಖಾತೆ, “NYC ವತಿಯಿಂದ ಹ್ಯಾಪಿ ದೀಪಾವಳಿ. ಇಂದು ರಾತ್ರಿ ನಮ್ಮ ದೀಪಗಳನ್ನು ಕೇಸರಿ ಬಣ್ಣಕ್ಕೆ ತಿರುಗಿಸುವ ಮೂಲಕ ನಾವು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ” ಎಂದಿದೆ.
ಮಾತ್ರವಲ್ಲದೆ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ ದೀಪಾವಳಿಯ ಪ್ರಯುಕ್ತ ‘ದಿವಾಳಿ ಸೂಪ್ ಆಂಡ್ ಕಿಚನ್’ ಕಾರ್ಯಕ್ರಮ ಆರಂಭಿಸಿ 10000 ಬಿಸಿಯೂಟ ವಿತರಿಸಿದೆ. ಅಮೆರಿಕದ ವೈವಿಧ್ಯ ಜನರಿಗೆ ದೀಪಾವಳಿ ಹಬ್ಬದ ಮಹತ್ವ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿಸಿಕೊಡುವುದು ಇದರ ಉದ್ದೇಶವಾಗಿದೆ.
Happy #Diwali from NYC!
We’re joining @FIANYNJCTorg in celebrating the festival of lights by turning our own lights all orange tonight! #ESBright
📷: filipspinka/IG pic.twitter.com/6QKyZlNHsF
— Empire State Building (@EmpireStateBldg) November 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.