ಕೇರಳದ ಅತ್ಯಂತ ವಿಶಿಷ್ಟ ಗ್ರಾಮವೊಂದು 208 ವಿಧದ ಮಾವಿನ ತಳಿಗಳನ್ನು ಪೋಷಣೆ ಮಾಡಿ ‘ಹೆರಿಟೇಜ್’ ಸ್ಥಾನಮಾನವನ್ನು ಪಡೆದುಕೊಂಡಿದೆ. ಕಣ್ಣಪುರಂ ಗ್ರಾಮ ಈ ಹೆಗ್ಗಳಿಕೆಗೆ ಪಾತ್ರವಾಗಿರುವ ಗ್ರಾಮ. ನಟ್ಟುಮಾಂಜೊಟ್ಟಿಲ್ ಎಂಬ ಮಾವಿನಹಣ್ಣು ಪ್ರಿಯರ ತಂಡವೊಂದು ಈ ಗ್ರಾಮಕ್ಕೆ ವಿಶಿಷ್ಟ ಹೆಗ್ಗಳಿಕೆ ಬರುವಂತೆ ಮಾಡಿದೆ.
ಹಲವು ವರ್ಷಗಳ ಹಿಂದೆ ಭೂ ಮಾಲೀಕನೊಬ್ಬ 200 ವರ್ಷ ಹಳೆಯ ವೆಲ್ಲಥಾನ್ ಮರವನ್ನು ಕಡಿದು ಹಾಕಿದ್ದ. ವೆಲ್ಲಥಾನ್ ಮಾವಿನ ಹಣ್ಣು ಅತ್ಯಂತ ಸಿಹಿ ಮತ್ತು ಗ್ರಾಮಸ್ಥರ ಹೃದಯದಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡಿತ್ತು. ಹೀಗಾಗಿ ನೆಲಕ್ಕೆ ಬಿದ್ದ ಮರಕ್ಕೆ ಪರ್ಯಾಯವಾಗಿ ಮತ್ತೊಂದು ಮರವನ್ನು ನೆಟ್ಟು ಬೆಳೆಸಬೇಕು ಎಂದು ನಟ್ಟುಮಾಂಜೊಟ್ಟಿಲ್ ತಂಡ ದೃಢನಿಶ್ಚಯ ಮಾಡಿತ್ತು.
ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ನೆಲಕ್ಕೆ ಬಿದ್ದ ಮರದ ಕೊಂಬೆಗಳನ್ನು ಎತ್ತಿಕೊಂಡು ಹೋಗಿ ಕಸಿ ಮಾಡಿದರು ಮತ್ತು ಅವುಗಳನ್ನು ಪೋಷಿಸಲು ಆರಂಭಿಸಿದರು. ಹೀಗೆ ಈ ಗ್ರಾಮಸ್ಥರ ಮಾವಿನ ಪ್ರೀತಿ ಆರಂಭವಾಯಿತು. ಗ್ರಾಮದ ಮೂಲೆ ಮೂಲೆಯಲ್ಲಿದ್ದ ವಿಭಿನ್ನ ಬಗೆಯ ಮಾವಿನ ತಳಿಗಳನ್ನು ಇವರು ಕಸಿ ಮಾಡಲು ಆರಂಭಿಸಿದ್ದಾರೆ. ಈಗ ಈ ಗ್ರಾಮದಲ್ಲಿ 208 ತಳಿಯ ಮಾವಿನ ಹಣ್ಣುಗಳು ಇವೆ. ಹತ್ತಿರ ಹತ್ತಿರ 500 ಮರಗಳಿವೆ.
ನಟ್ಟುಮಾಂಜೊಟ್ಟಿಲ್ ಎಂಬ ಹೆಸರಿನಲ್ಲಿ ಫೇಸ್ಬುಕ್ ಪೇಜ್ ಅನ್ನು ಕೂಡ ತೆರೆಯಲಾಗಿದೆ. ಇಲ್ಲಿ ಮ್ಯಾಂಗೋ ಪ್ರಿಯರು ಒಟ್ಟುಗೂಡಿ ಚರ್ಚೆ ನಡೆಸುತ್ತಾರೆ. ಮಾವಿನ ಹಣ್ಣಿನ ರುಚಿ, ಆಕೃತಿ ಹೀಗೆ ಎಲ್ಲವೂಗಳ ಬಗ್ಗೆಯೂ ಇಲ್ಲಿ ಜನರು.
ಈ ಗ್ರಾಮದ ಕೆಲವೇ ಭೂ ಪ್ರದೇಶದಲ್ಲಿ ಸುಮಾರು 208ಕ್ಕೂ ಅಧಿಕ ವಿಧದ ನೂರಾರು ಮಾವಿನ ಮರಗಳು ಕಾಣಲು ಸಿಗುತ್ತದೆ.
2020ರ ಜುಲೈ 22ರಂದು ರಾಷ್ಟ್ರೀಯ ಮಾವು ದಿನದಂದು ಕೇರಳ ಜೀವವೈವಿಧ್ಯ ಮಂಡಳಿ ಕಣ್ಣಪುರಂ ಗ್ರಾಮಕ್ಕೆ “ದೇಶಿಯ ಮಾವು ಪಾರಂಪರಿಕ ಪ್ರದೇಶ” ಎಂಬದ ಗುರುತನ್ನು ನೀಡಿದೆ. ಈ ಗುರುತು ಗ್ರಾಮಕ್ಕೆ ಒಂದು ವಿಶಿಷ್ಟತೆಯನ್ನು ತಂದು ಕೊಟ್ಟಿದೆ. ಈ ಗ್ರಾಮದ ಜನರ ಮಾವಿನ ಪ್ರೀತಿ ಈಗ ಎಲ್ಲರ ಮನೆ ಮಾತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.