ಬೆಳ್ತಂಗಡಿ : ಹದಗೆಟ್ಟರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ವಿದ್ಯಾರ್ಥಿ ಸಂಘಗಳೇ ಸಮಾಜಕ್ಕೆ ಮಾದರಿ. ಪ್ರತಿನಿಧಿಗಳಾಗಿ ಆಯ್ಕೆಗೊಂಡ ವಿದ್ಯಾರ್ಥಿಗಳೇ ಮುಂದಿನ ಪೀಳಿಗೆಯ ಮಾದರಿ ನಾಯಕರು ಎಂದು ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಕೆ. ಎಸ್. ನರಸಿಂಹ ಮೂರ್ತಿ ಹೇಳಿದರು.
ಅವರು 9ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಶಿಕ್ಷಣ ಎನ್ನುವುದು ಕಾಲದಿಂದ ಕಾಲಕ್ಕೆ ಬದಲಾವಣೆ ಹೊಂದುತ್ತಿದೆ. ಮಾಹಿತಿಯುಗದಲ್ಲಿ ಸುದ್ಧಿಗಳು ಸ್ಪೋಟಗೊಂಡು ಅಧ್ಯಾಪಕರ ಬೆರಳತುದಿಗಿಂತ ವಿದ್ಯಾರ್ಥಿಗಳಲ್ಲಿ ಮಾಹಿತಿಯ ಪ್ರಮಾಣ ಅಧಿಕವಾಗಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಹೊಂದಬೇಕಾದರೆ ಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬದುಕಿನಲ್ಲಿ ಯಶಸ್ಸು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸಿ ಸೋಲು-ಗೆಲುವನ್ನು ಹಗಲು ಇರುಳಿಗೆ ಹೋಲಿಸಿ ಮುನ್ನಡೆಯಬೇಕು. ಆತ್ಮ ವಿಶ್ವಾಸವು ಪುಸ್ತಕದಲ್ಲಿ ಸಿಗುವಂತದಲ್ಲ.
ಹಲವಾರು ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಇದರ ಪ್ರಯೋಜನ ನಮಗರಿವಾಗುತ್ತದೆ. ಉತ್ತಮ ವಾಗ್ಮಿಯಾಗಬೇಕಾದರೇ ಮೊದಲು ಒಳ್ಳೆಯ ಕೇಳುಗನಾಗಬೇಕು. ಸ್ಪರ್ಧೆ ಎಂಬುದು ನಾಲ್ಕು ಗೋಡೆಗಳ ನಡುವಿನ ವಿಷಯವಲ್ಲ. ಜಗತ್ತಿನ ಒತ್ತಡಗಳ ನಡುವೆ ಈಜಿ ಸಮಸ್ಯೆಗಳನ್ನು ಸಮಾನಾಗಿ ಎದುರಿಸುವ ಮನೋಭಾವ ನಮ್ಮದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಯಶೋವರ್ಮ ಅವರು, ಶಿಕ್ಷಣ ಅನ್ನೋದು ಅತ್ಯಂತ ಅಮೂಲ್ಯ. ಆದರೆ ಕಲಿಕೆಯ ಆಯ್ಕೆಯಲ್ಲಿ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ಶಿಕ್ಷಣದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ತಮ್ಮ ತಪ್ಪುಗಳನ್ನು ಅವಲೋಕನ ಮಾಡಿಕೊಂಡು ಅದನ್ನು ಸರಿಪಡಿಸಿಕೊಂಡು ಗುರಿಯನ್ನು ತಲುಪಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ವಿವಿಧ ಸಂಘಗಳ ಜವಾಬ್ದಾರಿಗಳನ್ನು ಹಂಚಲಾಯಿತು. ಇದೇ ವೇಳೆ ಅಂತಿಮ ಪತ್ರಿಕೋದ್ಯಮ ವಿದ್ಯಾರ್ಥಿಗಳ ‘ಚಿಗುರು’ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ವಿನೋದ್ ಪ್ರಸಾದ್ ಸ್ವಾಗತಿಸಿ, ಪ್ರಶಾಂತ್ ದಿಡುಪೆ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.