ನವದೆಹಲಿ: ಎಎಪಿ ಮುಖಂಡ ಹಾಗೂ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರ್ತಿ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ, ಈ ಸಲ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ದೆಹಲಿ ಪೊಲೀಸರ ಸಂಪೂರ್ಣ ನಿಯಂತ್ರಣವನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರಕ್ಕೆ ನೀಡಿದರೆ, ಸುಂದರ ಮಹಿಳೆಯರು ಮಧ್ಯರಾತ್ರಿಯಲ್ಲೂ ಹೊರ ಹೋಗಲು ಸಾಧ್ಯವಾಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.
ಭಾರ್ತಿ ಅವರ ಸುಂದರ ಮಹಿಳೆಯರು ಎಂಬ ಹೇಳಿಕೆ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಇದೊಂದು ಮಹಿಳೆಯರ ವಿರುದ್ಧದ ಅಸಹ್ಯಕರ, ಅವಹೇಳನಕಾರಿ ಹೇಳಿಕೆ ಎಂದಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇದೊಂದು ಅತ್ಯಂತ ಆಕ್ಷೇಪಾರ್ಹ ಹೇಳಿಕೆ. ಮಹಿಳೆಯರ ಬಗ್ಗೆ ಅವರು ಏನು ಯೋಚಿಸುತ್ತಾರೆ ಎಂಬುದು ಇದರಿಂದ ತಿಳಿದು ಬರುತ್ತದೆ ಎಂದು ಬಿಜೆಪಿ ಟೀಕಿಸಿದೆ.
ತನ್ನ ಹೇಳಿಕೆ ಸಮರ್ಥನೆ ನೀಡಿರುವ ಭಾರ್ತಿ, ‘ಬ್ರಿಟಿಷ್ ಆಡಳಿತದಲ್ಲಿ ಭದ್ರತೆ ಎಷ್ಟೊಂದು ಕಠಿಣವಾಗಿತ್ತು ಎಂದರೆ, ಚಿನ್ನಾಭರಣಗಳನ್ನು ಧರಿಸಿದ ಸುಂದರ ಮಹಿಳೆ ಮಧ್ಯರಾತ್ರಿಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪ್ರಯಾಣಿಸಬಹುದಾಗಿತ್ತು ಎಂದು ನನ್ನ ಅಜ್ಜಿ ಹೇಳುತ್ತಿದ್ದರು. ಅದನ್ನೇ ನಾನು ಹೇಳಿದ್ದೇನೆ, ಮಹಿಳೆಯರಿಗೆ ಭದ್ರವಾಗಿದ್ದೇವೆ ಎಂಬ ಭಾವನೆ ಬರಲಿ ಎಂಬುದಷ್ಟೇ ನನ್ನ ಮಾತಿನ ಅರ್ಥವಾಗಿತ್ತು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.