ವಾಷಿಂಗ್ಟನ್: ಅಮೆರಿಕ ಜನರು ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಕೈ ಬಿಟ್ಟು, ಜೋ ಬೈಡನ್ ಮತ್ತು ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಶ್ವೇತ ಭವನಕ್ಕೆ ಕಳುಹಿಸಿದ್ದಾರೆ.
ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಅಮೆರಿಕನ್ ಮಹಿಳೆ ಎಂಬ ಕೀರ್ತಿ ತನ್ನದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತೀಯರು ಸಂತಸ ಪಡುವ ಇನ್ನೊಂದು ಅಂಶವೆಂದರೆ ಜೋ ಬೈಡನ್ ಅವರ ಕೋವಿಡ್ ಟಾಸ್ಕ್ ಫೋರ್ಸ್ಗೆ ಭಾರತದ, ಕರ್ನಾಟಕ ರಾಜ್ಯದ ಮಂಡ್ಯ ಮೂಲದ, ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಡಾ ವಿವೇಕ್ ಮೂರ್ತಿ ಅವರು ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಾ ವಿವೇಕ್ ಮಂಡ್ಯದ ಮದ್ದೂರಿನ ಹಲಗೆರೆ ಎಂಬಲ್ಲಿನವರಾಗಿದ್ದಾರೆ.
ವಿವೇಕ್ ಅವರು ಅಮೆರಿಕಾದಲ್ಲಿ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ಅಲ್ಲಿನ 19 ನೇ ಸರ್ಜನ್ ಜನರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. 2017 ರ ವರೆಗೆ ಈ ವೃತ್ತಿಯಲ್ಲಿದ್ದ ಅವರು ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡಿದ್ದರು. ಒಬಾಮಾ ಅಧ್ಯಕ್ಷ ಸ್ಥಾನದಲ್ಲಿದ್ದ ಸಂದರ್ಭದಲ್ಲಿ ಬೈಡನ್ ಅವರು ಅಮೆರಿಕದ ಉಪಾಧ್ಯಕ್ಷರಾಗಿದ್ದರು.
ಸದ್ಯ ಅಮೆರಿಕದ ಚುನಾವಣೆ ಗೆದ್ದು, ಶ್ವೇತ ಭವನದ ಗದ್ದುಗೆ ಏರಿರುವ ಬೈಡನ್ ಅವರ ಇಬ್ಬರು ಮುಖ್ಯ ಸಲಹೆಗಾರರ ಪೈಕಿ ಡಾ ವಿವೇಕ್ ಅವರೂ ಒಬ್ಬರು. ಕೊರೋನಾ ಸಂದರ್ಭದಲ್ಲಿ ಬೈಡನ್ಗೆ ವಿವೇಕ್ ವೈಯಕ್ತಿಕ ಸಲಹೆಗಳನ್ನು ಸಹ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.