ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38, 310 ಹೊಸ ಕೊರೋನಾ ಸೋಂಕುಗಳು ಪತ್ತೆಯಾಗಿದೆ. ಹೀಗಾಗಿ ದೇಶದ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 82,67,623 ಆಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 490 ಕೊರೋನಾ ಸಾವುಗಳು ಸಂಭವಿಸಿದೆ. ಒಟ್ಟು ಸಾವುಗಳ ಸಂಖ್ಯೆ 1,23,097 ಆಗಿದೆ.
ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,41,405 ಆಗಿದೆ. ಚೇತರಿಸಿಕೊಂಡ ಒಟ್ಟು ಸಂಖ್ಯೆ 76,03,121 ಆಗಿದ್ದು, 58,323 ಪ್ರಕರಣಗಳು ಡಿಸ್ಚಾರ್ಜ್ ಕಂಡಿವೆ.
ನವೆಂಬರ್ 2ರಂದು ದೇಶದಾದ್ಯಂತ 10,46,247 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ. ಇದುವರೆಗೆ ನಡೆಸಲಾದ ಹುಟ್ಟು ಪರೀಕ್ಷೆ 11,17,89,350 ಆಗಿದೆ.
ಪ್ರಸ್ತುತ ದೇಶದ ಚೇತರಿಕೆ ಪ್ರಮಾಣ 91.68% ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.