ನವದೆಹಲಿ: ಕೆಲ ಸಮಯದ ಹಿಂದೆ ಪ್ರಧಾನಿ ಮೋದಿ ಅವರು ಕರೆ ಕೊಟ್ಟ ವೋಕಲ್ ಫಾರ್ ಲೋಕಲ್ಗೆ ಅನುಗುಣವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಹ ಒಂದು ಹೆಜ್ಜೆ ಮುಂದಿಟ್ಟಿದೆ.
ಭಾರತೀಯ ತಳಿಯ ಶ್ವಾನಗಳನ್ನು NDRF ನ ಭಾಗವಾಗಿಸಿಕೊಳ್ಳಲು ಪಡೆ ನಿರ್ಣಯ ಮಾಡಿದ್ದು, ಈ ಹಿನ್ನೆಲೆಯಲ್ಲಿ ತರಬೇತಿ ನೀಡುತ್ತಿದೆ. ದೇಶೀಯ ತಳಿಯ ಶ್ವಾನಗಳ ಕಾರ್ಯ ಚಟುವಟಿಕೆ ಮತ್ತು ಪತ್ತೆ ಹಚ್ಚುವಿಕೆಯ ಸಾಮರ್ಥ್ಯ ಯಾವುದೇ ವಿದೇಶಿ ತಳಿಯ ಶ್ವಾನಗಳಿಗಿಂತ ಕಡಿಮೆ ಇಲ್ಲ. ಈ ಹಿನ್ನೆಲೆಯಲ್ಲಿ ತಂಡ ಈ ಕಾರ್ಯಕ್ಕೆ ಮುಂದಾಗಿದೆ.
ಭಾರತೀಯ ತಳಿಯ ಶ್ವಾನಗಳಿಗೆ ತರಬೇತಿ ನೀಡಲು ಸ್ವಲ್ಪ ಸಹನೆ ಹೆಚ್ಚಾಗಿರಬೇಕು. ತಾಳ್ಮೆಯಿಂದ ಈ ನಾಯಿಗಳನ್ನು ಪಳಗಿಸಲು ಪ್ರಯತ್ನ ಪಟ್ಟರೆ ಅವುಗಳಿಂದ ಪರಿಣಾಮಕಾರಿ ಲಾಭ ಹೊಂದುವುದು ಸಾಧ್ಯ. ಯಾವುದೇ ಕಾರ್ಯಾಚರಣೆಯ ಸಂದರ್ಭದಲ್ಲಿ ಅವುಗಳನ್ನು ಬಳಕೆ ಮಾಡಬಹುದಾಗಿದೆ. ಈಗಾಗಲೇ ಭಾರತೀಯ ತಳಿಯ ಶ್ವಾನಗಳಿಗೆ ತರಬೇತಿ ಆರಂಭ ಮಾಡಲಾಗಿದೆ ಎಂದು ಎನ್ಡಿಆರ್ಎಫ್ ತಂಡದ 8ನೇ ಬೆಟಾಲಿಯನ್ ಕಮಾಂಡಂಟ್ ಪಿ ಕೆ ತಿವಾರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.