ನವದೆಹಲಿ: ಫ್ರಾನ್ಸಿನಲ್ಲಿ ಭಯೋತ್ಪಾದಕರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ʼಅಲ್ಲಾಹು ಅಕ್ಬರ್ʼ ಎನ್ನುತ್ತಾ ಒರ್ವ ಉಗ್ರ ಮಹಿಳೆಯನ್ನು ಶಿರಚ್ಛೇಧ ಮಾಡಿದ್ದಾನೆ ಮತ್ತು ಇನ್ನಿಬ್ಬರನ್ನು ಹತ್ಯೆ ಮಾಡಿದ್ದಾನೆ. ಹಲವರನ್ನು ಘಾಸಿಗೊಳಿಸಿದ್ದಾನೆ. ನೈಸ್ ಫ್ರೆಂಚ್ ನಗರದಲ್ಲಿ ಚರ್ಚ್ವೊಂದರ ಸಮೀಪದಲ್ಲಿ ಗುರುವಾರ ಈ ಘಟನೆ ನಡೆದಿದೆ.
ಒಬ್ಬರನ್ನು ಭಯೋತ್ಪಾದಕ ಚರ್ಚ್ ಒಳಗೆ ಚಾಕು ಬಳಸಿ ಹತ್ಯೆ ಮಾಡಿದ್ದಾನೆ. ಮೃತರನ್ನು ಚರ್ಚ್ ವಾರ್ಡನ್ ಎಂದು ಗುರುತಿಸಲಾಗಿದೆ.
“ಹಲ್ಲೆಕೋರ ಅಲ್ಲಾಹು ಅಕ್ಬರ್ ಎನ್ನುತ್ತಾ ದಾಳಿ ನಡೆಸಿದ್ದಾನೆ. ಬಂಧನದ ಬಳಿಕವೂ ಆತ ಘೋಷಣೆ ಕೂಗುವುದನ್ನು ಮುಂದುವರೆಸಿದ್ದಾನೆ. ಬಂಧನದ ಸಂದರ್ಭದಲ್ಲಿ ಪೊಲೀಸರು ಈತನ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಆತ ಸದ್ಯ ಆಸ್ಪತ್ರೆಯಲ್ಲಿದ್ದಾನೆ, ಜೀವಂತವಾಗಿದ್ದಾನೆ” ಎಂದು ನೈಸ್ ನಗರದ ಮೇಯರ್ ಮಾಹಿತಿ ನೀಡಿದ್ದಾರೆ.
ಮೊನ್ನೆಯಷ್ಟೇ ಫ್ರಾನ್ಸಿನಲ್ಲಿ ಪ್ರವಾದಿ ಮೊಹಮ್ಮದರ ಕಾರ್ಟೂನ್ ಪ್ರದರ್ಶಿಸಿದ್ದ ಶಿಕ್ಷಕನನ್ನು ಶಿರಚ್ಛೇಧ ಮಾಡಲಾಗಿತ್ತು. ಈ ಘಟನೆ ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಮತ್ತೊಂದು ಉಗ್ರ ಘಟನೆ ಅಲ್ಲಿ ಸಂಭವಿಸಿದೆ.
At least three were killed in a knife attack in Nice, France, in an incident authorities are investigating as terrorism https://t.co/668o7UOejE
— Post World (@PostWorld) October 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.