ಉಡುಪಿ : ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಾಯಿ ಕಾಟ ಜೋರಾಗಿ ಪ್ರತಿದ್ವನಿಸಿದೆ. ಇದರ ಪರಿಣಾಮವಾಗಿ ಉಡುಪಿಯ ನಗಸಭಾ ಆಡಳಿತ ಇನ್ನು ಮುಂದೆ ಸಾಕು ನಾಯಿಗಳ ಬಗ್ಗೆ ಕಡ್ದಾಯ ಅನುಮತಿ ಹಾಗೂ ಶುಲ್ಕ ನೀಡಬೇಕು ಎನ್ನುವ ನಿರ್ಣಯ ಕೈಗೊಂಡಿದೆ.
ನಗರಸಭಾ ಅಧ್ಯಕ್ಷ ಯುವರಾಜ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾನ್ಯ ಸಭೆಯಲ್ಲಿ ಆಡಳಿತಪಕ್ಷ- ಹಾಗೂ ವಿಪಕ್ಷದ ಬಹುತೇಕ ಸದಸ್ಯರು ಬೀದಿ ನಾಯಿಗಳ ಕಾಟದ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಅಲ್ಲದೇ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿಸ್ತೆ ಮಾಡಿದರೆ ಸಾಲುದು ಅವುಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂದು ಸದಸ್ಯರು ಆಗ್ರಹಿಸಿದರು. ಆಡಳಿತ ಪಕ್ಷದ ಸದಸ್ಯ ಪ್ರಶಾಂತ್ ಅಮೀನ್ ಚತ್ತಿಸಘಡದ ಸ್ಥಳೀಯಡಳಿತ ಕೈಗೊಂಡ ಹೊಸ ಕಾನೂನು ಮತ್ತು ಇತ್ತೀಚೆಗೆ ಕೇರಳದ ಸ್ಥಳೀಯಾಡಳಿತ ನಾಯಿ ಜೊತೆಗೆ ಮಾಲಕನ ಜೊತೆ ಇರುವ ಭಾವಚಿತ್ರವನ್ನು ನೀಡಬೇಕು ಮತ್ತು ವಿವರವನ್ನು ಸ್ಥಳೀಯಡಳಿತಕ್ಕೆ ನೀಡಬೇಕು ಎನ್ನುವ ನಿಯಮದ ಬಗ್ಗೆ ಉದಾರಣೆಯ ಮೂಲಕ ತಿಳಿಸಿ ಉಡುಪಿಯಲ್ಲೂ ಯಾಕೆ ಈ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಪ್ರಶ್ನಿಸಿದರು.
ಇದಕ್ಕೆ ಹಲವು ಸದಸ್ಯರೂ ಕೂಡಾ ಧ್ವನಿಗೂಡಿಸಿದರು. ಉತ್ತಮ ಅಧಿಕಾರಿಗಳನ್ನು ನೇಮಕ ಮಾಡಿ ರಾಜ್ಯಕ್ಕೇ ಮಾದರಿಯಾಗಬಲ್ಲ ಕಾನೂನನ್ನ ರೂಪಿಸಿ ಎಂದು ಸಲಹೆಗಳನ್ನು ವಿಪಕ್ಷದ ಸದಸ್ಯರು ನೀಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಯುವರಾಜ್ ಬೀದಿ ನಾಯಿಗಳ ಕಾಟವನ್ನ ತಡೆಯಬೇಕಾದ್ರೆ ಸಾಕು ನಾಯಿಗಳ ಬಗ್ಗೆ ನಾವು ಗಮನ ಹರಿಸಬೇಕಾಗುತ್ತದೆ. ಮನೆಯ ನಾಯಿ ಮರಿಗಳನ್ನು ಹಾಕಿದಾಗ ಅವುಗಳಲ್ಲಿ ಹೆಣ್ಣು ಮರಿಗಳನ್ನು ಸಾರ್ವಜನಿಕವಾಗಿ ಬಿಟ್ಟು ಬರುವ ಹಾಗೂ ವಿವಿಧ ಕಡೆಗಳಲ್ಲಿ ಹೆಣ್ಣು ನಾಯಿಯನ್ನೇ ಬಿಟ್ಟು ಬರುವ ಪರಿಪಾಠ ನಡೆಯುತ್ತಿದೆ.
ಇದರಿಂದ ಬೀದಿ ನಾಯಿಗಳ ಕಾಟ ಹೆಚ್ಚಳಕ್ಕೆ ಕಾರಣವಾಗಿದೆ. ಹೊಸ ನಿಯಮದ ಮೂಲಕನೇ ಈ ಬೀದಿ ನಾಯಿಗಳ ನಿಯಂತ್ರಣ ಸಾದ್ಯ. ಆದ್ದರಿಂದ ನಗರಸಭಾ ವ್ಯಾಪ್ತಿಯಲ್ಲಿ ನಾಯಿಗಳ ಸಾಕುವುದಕ್ಕೆ ಕಡ್ಡಾಯ ಅನುಮತಿ ಹಾಗೂ ಶುಲ್ಕ ಭರಿಸಬೇಕು ಎನ್ನುವ ಹೊಸ ನಿಯಮದ ಬಗ್ಗೆ ನಿರ್ಣಯ ಕೈಗೊಳ್ಳುವ ಎಂದು ತಿಳಿಸಿದಾಗ ಎಲ್ಲಾ ಸದಸ್ಯರು ಒಪ್ಪಿಗೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.