ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಡಿಜಿಟಲೀಕರಣದತ್ತ ದಾಪುಗಾಲು ಇಡುತ್ತಿದೆ.
ಸೊಸೈಟಿಗೆ ಹಾಕಿದ ಹಾಲಿನ ಪ್ರಮಾಣ, ಸಮಯ, ಕೊಬ್ಬಿನಂಶ, ಸಿಎಲ್ಆರ್, ಎಸ್ಎನ್ಎಫ್, ದರ, ಒಟ್ಟು ಮೊತ್ತ ಸೇರಿದಂತೆ 1 ವರ್ಷದ ಮಾಹಿತಿಯನ್ನು ಹೈನುಗಾರರಿಗೆ ಕ್ಷಿಪ್ರಗತಿಯಲ್ಲಿ ಪರಿಶೀಲಿಸಲು ಸಹಾಯ ಮಾಡುವಂತಹ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ.
ಒಕ್ಕೂಟದ ಸಾಫ್ಟ್ವೇಲ್ ಸಮಾಲೋಚಕ ಕೇಶವಪ್ರಸಾದ್ ಸೂರ್ಡೇಲು ಅವರು ಪುತ್ತೂರಿನ ವಿವೇಕಾನಂದ ಕಾಲೇಜು ವಿದ್ಯಾರ್ಥಿ ಶ್ರೀನಿಧಿ ಆರ್ ಎಸ್ ಜೊತೆಗೂಡಿ ಈ ಆ್ಯಪನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಹೆಸರು ಎಂಪಿಸಿಎಸ್ (ಮಿಲ್ಕ್ ಪ್ರೊಡ್ಯೂಸರ್ಸ್ ಕೋ-ಆಪರೇಟಿವ್ ಸೊಸೈಟಿ).
ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನವನ್ನು ನೀಡಲು ಮತ್ತು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಒಕ್ಕೂಟವು ಈ ತಂತ್ರಜ್ಞಾನಗಳನ್ನು ರೂಪಿಸಿದೆ .
ಒಕ್ಕೂಟದ ಅಡಿಯಲ್ಲಿನ 728 ಸೊಸೈಟಿ ಮತ್ತು 129 ಬಲ್ಕ್ ಮಿಲ್ಕ್ ಕೂಲರ್ಗಳಲ್ಲಿನ ದಾಸ್ತಾನಿನ ಬಗ್ಗೆ ಕ್ಷಿಪ್ರಗತಿಯಲ್ಲಿ ಮಾಹಿತಿಯನ್ನು ಒದಗಿಸುವಂತಹ ವ್ಯವಸ್ಥೆಯನ್ನು ಇದು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.