ಲಂಡನ್: ಸೌದಿ ಅರೇಬಿಯಾ ಪಾಕಿಸ್ಥಾನಕ್ಕೆ ಮತ್ತೊಂದು ಆಘಾತವನ್ನು ನೀಡಿದೆ. ಪಾಕಿಸ್ಥಾನದ ಭೂಪಟದಿಂದ ಅದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಲ್ತಿಸ್ಥಾನ್ ಅನ್ನು ತೆಗೆದು ಹಾಕಿದೆ.
ಈ ಬಗ್ಗೆ ಪಿಒಕೆ ಕಾರ್ಯಕರ್ತರು ಅಮ್ಜದ್ ಆಯೂಬ್ ಮಿರ್ಜಾ ಟ್ವಿಟರ್ ಮೂಲಕ ಮಾಹಿತಿಯನ್ನು ನೀಡಿದೆ.
ಅವರು ಮಾಡಿದ ಟ್ವೀಟ್ಗೆ, “ಭಾರತಕ್ಕೆ ಸೌದಿ ಅರೇಬಿಯಾ ದೀಪಾವಳಿ ಉಡುಗೊರೆ ನೀಡಿದೆ. ಪಾಕಿಸ್ಥಾನದ ಭೂಪಟದಿಂದ ಕಾಶ್ಮೀರ ಮತ್ತು ಗಿಲ್ಗಿಟ್-ಬಲ್ತಿಸ್ಥಾನ್ ಅನ್ನು ತೆಗೆದು ಹಾಕಿದೆ” ಎಂದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಸೌದಿ ಅರೇಬಿಯಾವು ನವೆಂಬರ್ 21-22ರಂದು ಜಿ -20 ಶೃಂಗಸಭೆಯನ್ನು ಆಯೋಜಿಸಿದ್ದು, ಇದರ ಅಧ್ಯಕ್ಷತೆಯ ನೆನಪಿಗಾಗಿ 20 ನೋಟುಗಳನ್ನು ಬಿಡುಗಡೆ ಮಾಡಿದೆ. ಆದರೆ ನೋಟಿನಲ್ಲಿ ಪ್ರದರ್ಶಿಸಲಾದ ವಿಶ್ವದ ನಕ್ಷೆಯಲ್ಲಿ ಗಿಲ್ಗಿಟ್-ಬಲ್ತಿಸ್ಥಾನ್ ಮತ್ತು ಕಾಶ್ಮೀರವನ್ನು ಪಾಕಿಸ್ಥಾನದ ಭಾಗಗಳಾಗಿ ತೋರಿಸಲಾಗಿಲ್ಲ ಎಂದು ವರದಿಯಾಗಿದೆ.
ಪಾಕಿಸ್ಥಾನದಲ್ಲಿ ಸೌದಿ ಅರೇಬಿಯಾದ ಈ ನಡೆ ಮತ್ತೊಮ್ಮೆ ದೊಡ್ಡ ಮುಖಭಂಗವನ್ನುಂಟು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.